ADVERTISEMENT

ಚಿಕ್ಕಮಗಳೂರು | ಪ್ರಪಾತಕ್ಕೆ ಉರುಳಿದ ಲಾರಿ: ಚಾಲಕ, ಕ್ಲೀನರ್ ಪಾರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 5:13 IST
Last Updated 16 ಸೆಪ್ಟೆಂಬರ್ 2023, 5:13 IST
   

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸೋಮನಕಾಡು ಬಳಿ 100 ಅಡಿಯಷ್ಟು ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದ್ದು, ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಟ್ಟ ಮಂಜು ಮತ್ತು ಮಳೆಯ ನಡುವೆ ದಾರಿ ಕಾಣಿಸದೆ ರಸ್ತೆ ಬದಿ ಇದ್ದ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ತಡೆಗೋಡೆಯೊಂದಿಗೆ ಲಾರಿ ಪ್ರಪಾತಕ್ಕೆ ಬಿದ್ದಿದೆ.

ಅರ್ಧದಲ್ಲಿ ಮರಕ್ಕೆ ಸಿಕ್ಕಿಕೊಂಡಿದ್ದರಿಂದ ಇಬ್ಬರ ಪ್ರಾಣ ಉಳಿದಿದೆ. ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ತುಂಬಿಕೊಂಡು ಲಾರಿ ಹೊರಟಿತ್ತು. ಸ್ಥಳೀಯರು ಚಾಲಕ ಮತ್ತು ಕ್ಲೀನರ್‌ ರಕ್ಷಣೆ ಮಾಡಿದ್ದಾರೆ. ಬಣಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.