
ಚಿಕ್ಕಮಗಳೂರು: ಶಾಸಕ ಎಚ್.ಡಿ.ತಮ್ಮಯ್ಯ ಅವರು ಅ.24ರಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರದ ವಿವಿಧ ವಾರ್ಡ್‌ಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ‘ನಿಮ್ಮ ಮನೆ ಬಾಗಿಲಿಗೆ ನಿಮ್ಮ ಶಾಸಕ’ ಕಾರ್ಯಕ್ರಮ, ಸೈಕಲ್ ಜಾಥಾ ಮೂಲಕ ಹಮ್ಮಿಕೊಂಡಿದ್ದು, ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 7.30ಕ್ಕೆ ವಾರ್ಡ್ ನಂ.15ರ ಐಸಿಪಿ (ಇಂಡಿಯನ್ ಐಸ್‌ಕ್ರೀಂ ಪಾರ್ಲರ್) ಬಾರ್‌ಲೈನ್ ರಸ್ತೆಯಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡುವರು. 7.45ಕ್ಕೆ ವಾರ್ಡ್ ನಂ.19ರ ಬಾರ್‌ಲೈನ್ ರಸ್ತೆ ಮೂಲಕ ಪೌರ ಕಾರ್ಮಿಕರ ವಸತಿಗೃಹದ ಸಮೀಪ ಸಂವಾದ ನಡೆಸುವರು.
8.15ಕ್ಕೆ ವಾರ್ಡ್ ನಂ.25ರ ವಿಜಯಪುರ 2ನೇ ಮುಖ್ಯ ರಸ್ತೆ ಮೂಲಕ ಆಂಜನೇಯ ದೇವಸ್ಥಾನದ ಸಮೀಪ ತೆರಳುವರು. 8.45ಕ್ಕೆ ವಾರ್ಡ್ ನಂ.31ರ ಆದಿಭೂತಪ್ಪ ದೇವಸ್ಥಾನದ ಸಮೀಪ ಭೇಟಿ ನೀಡುವರು. 9.15ಕ್ಕೆ ಆದಿಭೂತಪ್ಪ ದೇವಸ್ಥಾನದಿಂದ ಹೊರಟು ಫುಡ್ ಪ್ಯಾಲೇಸ್ ಮೂಲಕ ಶಾರದಾಂಬ ದೇವಸ್ಥಾನದ ಸಮೀಪ ಸಂವಾದ ನಡೆಸುವರು ಎಂದು ಶಾಸಕರ ಆಪ್ತ ಸಹಾಯಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.