ADVERTISEMENT

ಶಾಸಕರಿಂದ ಧ್ವಜಾರೋಹಣ ನಿಯಮದ ಉಲ್ಲಂಘನೆ: ಜಿ.ಸುಬ್ರಹ್ಮಣ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:28 IST
Last Updated 2 ನವೆಂಬರ್ 2025, 4:28 IST
ಜಿ.ಸುಬ್ರಹ್ಮಣ್ಯ
ಜಿ.ಸುಬ್ರಹ್ಮಣ್ಯ   

ತರೀಕೆರೆ: ‘ಪಟ್ಟಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣಕ್ಕೆ ಶಾಸಕರು ನಿಗದಿತ ಸಮಯಕ್ಕೆ ಬಾರದ ಕಾರಣ ಅವರಿಗಾಗಿ ಕಾದು ನಂತರ ತಡವಾಗಿ ಧ್ವಜಾರೋಹಣ ನೆರವೇರಿಸಿದ್ದು, ಧ್ವಜಾರೋಹಣ ನಿಯಮ ಉಲ್ಲಂಘಿಸಿ ಶಾಸಕರು ರಾಷ್ಟ್ರಧ್ವಜ ಅವಮಾನ ಮಾಡಿದ್ದಾರೆ’ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ವಕೀಲ ಜಿ.ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಅಧಿಕಾರಿಗಳು ಜನಪ್ರತಿನಿಧಿಗಳನ್ನು ಎದುರು ಹಾಕಿಕೊಂಡು ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮವನ್ನು ನಿಯಮ ಅನುಸರಿಸಿ ಸಹ ನಡೆಸಲು ಸಾಧ್ಯವಿಲ್ಲ. ಕಾನೂನು ಮತ್ತು ನಿಯಮಕ್ಕಿಂತಲೂ ಶಾಸಕರೇ ಪ್ರಧಾನ ಎನ್ನುವುದನ್ನು ತೋರಿಸಿ ಕೊಟ್ಟಂತೆ ಆಗಿದೆ ಎಂದು ಆರೋಪಿಸಿದ್ದಾರೆ.

ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ರಾಷ್ಟ್ರೀಯ ಹಬ್ಬಗಳಲ್ಲಿ ಪ್ರತಿ ಬಾರಿ ಒಂದಿಲ್ಲೊಂದು ಎಡವಟ್ಟು ಮಾಡುತ್ತಿದ್ದು ಈ ಬಾರಿಯೂ ಮುಂದುವರಿದಿದೆ. ಧ್ವಜ ಗೌರವ ವಂದನೆ ಸ್ವೀಕರಿಸುವ ಅಧಿಕಾರ ಶಾಸಕರಿಗೆ ಇಲ್ಲ. ಆದರೆ ಪ್ರತಿ ಬಾರಿಯಂತೆ ಈ ಬಾರಿಯು ಸಹ ಇದು ಮುಂದುವರಿದಿದ್ದು ವಿಷಾದಕರ. ಇದನ್ನು ಹೇಳುವ ಧೈರ್ಯ ಯಾರಿಗೂ ಇಲ್ಲದಂತೆ ಆಗಿದೆ. ಗೌರವ ವಂದನೆ ಸ್ವೀಕರಿಸುವುದು ತಮ್ಮ ಪ್ರತಿಷ್ಠೆಯಾಗಿ ಭಾವಿಸಿರುವುದು ನಿಜಕ್ಕೂ ದುರ್ದೈವ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.