ADVERTISEMENT

ನರಸಿಂಹರಾಜಪುರ | ಕ್ಷೀಣಿಸಿದ ಮಳೆ: ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:30 IST
Last Updated 22 ಆಗಸ್ಟ್ 2025, 7:30 IST
ನರಸಿಂಹರಾಜಪುರದಲ್ಲಿ ಈಚೆಗೆ ಸುರಿದ ಮಳೆಗೆ ರಾವೂರು ಗ್ರಾಮದ ಶಂಕರಪ್ಪ ಅವರ ಮನೆ ಹಾನಿಯಾಗಿರುವುದು
ನರಸಿಂಹರಾಜಪುರದಲ್ಲಿ ಈಚೆಗೆ ಸುರಿದ ಮಳೆಗೆ ರಾವೂರು ಗ್ರಾಮದ ಶಂಕರಪ್ಪ ಅವರ ಮನೆ ಹಾನಿಯಾಗಿರುವುದು   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಮಳೆ ಕ್ಷೀಣಿಸಿದ್ದರೂ ಆಗಾಗೆ ಮಳೆ ಬರುತ್ತಿದೆ. ಈಚೆಗೆ ಸುರಿದ ಭಾರಿ ಗಾಳಿ, ಮಳೆಗೆ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.

ತಾಲ್ಲೂಕಿನ ರಾವೂರು ಗ್ರಾಮದಲ್ಲಿ ಸೋಮವಾರ ಸುರಿದ ಮಳೆಗೆ ಗ್ರಾಮದ ಶಂಕರಪ್ಪ ಅವರ ವಾಸದ ಮನೆ ಹಾನಿಯಾಗಿದೆ. ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಾಲ್ ಕೊಪ್ಪ ಗ್ರಾಮದ ಪಾರ್ವತಿ ಅವರ ಮನೆಯ ಗೋಡೆ ಬುಧವಾರ ಕುಸಿದುಬಿದ್ದಿದೆ. ಬುಧವಾರದಿಂದ ಗುರುವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 7.4 ಮಿ.ಮೀ, ಬಾಳೆಹೊನ್ನೂರಿನಲ್ಲಿ 4.8 ಮಿ.ಮೀ ಹಾಗೂ ಮೇಗರಮಕ್ಕಿಯಲ್ಲಿ 6.0 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT