ADVERTISEMENT

ನರಸಿಂಹರಾಜಪುರ: ಬೆಳ್ಳೂರಿನಲ್ಲಿ ಫೆ. 21ರಿಂದ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:06 IST
Last Updated 20 ಫೆಬ್ರುವರಿ 2026, 4:06 IST
<div class="paragraphs"><p>ನರಸಿಂಹರಾಜಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಬುಧವಾರ ಎಸ್.ಎಚ್. ಪೂರ್ಣೇಶ್, ಎಸ್.ಎಸ್. ಸಂತೋಷ್ ಕುಮಾರ್ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು</p></div>

ನರಸಿಂಹರಾಜಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಬುಧವಾರ ಎಸ್.ಎಚ್. ಪೂರ್ಣೇಶ್, ಎಸ್.ಎಸ್. ಸಂತೋಷ್ ಕುಮಾರ್ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು

   

ನರಸಿಂಹರಾಜಪುರ: ಬೆಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಫೆ. 21, 22ರಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಕ್ಷರ ಜಾತ್ರೆಗೆ ಎಲ್ಲ ಸಾಹಿತ್ಯಾಸಕ್ತರು ಬರಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಹಾಗೂ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್. ಸಂತೋಷ್ ಕುಮಾರ್ ಹೇಳಿದರು.

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 21ರಂದು ಶನಿವಾರ ಬೆಳಿಗ್ಗೆ 9ಕ್ಕೆ ತಹಶೀಲ್ದಾರ್ ನೂರಲ್ ಹುದಾ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಕಸಾಪ ಜಿಲ್ಲಾ ಘಕಟದ ಅಧ್ಯಕ್ಷ ಸೂರಿ ಶ್ರೀನಿವಾಸ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ತಾಲ್ಲೂಕು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ನಾಡ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 2.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮೆರವಣಿಗೆ ಉದ್ಘಾಟಿಸಲಿದ್ದಾರೆ ಎಂದರು. 

ADVERTISEMENT

ಸಂಜೆ 4ಕ್ಕೆ ಕನ್ನಡ ಗಮಕ ಪ್ರವಚನಕಾರ ಮುನಿರಾಜ್ ರೆಂಜಾಳ ಸಮ್ಮೇಳನ, ಶಾಸಕ ಟಿ.ಡಿ. ರಾಜೇಗೌಡ ಪುಸ್ತಕ ಮಳಿಗೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ. 9 ಲೇಖಕರು ಬರೆದ ಪುಸ್ತಕಗಳನ್ನು ಸೂರಿ ಶ್ರೀನಿವಾಸ್ ಬಿಡುಗಡೆ ಮಾಡಲಿದ್ದಾರೆ. 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅನಂತ ಪದ್ಮನಾಭ ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡುವರು. ಸಮ್ಮೇಳನದ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದು, ಸಂಜೆ 6ಕ್ಕೆ ಜಾನಪದ ಗೋಷ್ಠಿ ನಡೆಯಲಿದೆ ಎಂದು ಹೇಳಿದರು. 

ಫೆ. 22ರಂದು ಬೆಳಿಗ್ಗೆ 9.30ಕ್ಕೆ ಯೋಧರ ಗೋಷ್ಠಿ, 11.30ಕ್ಕೆ ಕೃಷಿ ಗೋಷ್ಠಿ, ಮಧ್ಯಾಹ್ನ 1.30ಕ್ಕೆ ಮಹಿಳಾ ಗೋಷ್ಠಿ, ಸಂಜೆ 4ಕ್ಕೆ ಸಾಹಿತ್ಯ ಸಿರಿ, ಕನ್ನಡ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಲೇಖಕ ಗೋಪಾಲ್ ಎಸ್. ಯಡಗೆರೆ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಗುವುದು. 10 ಜನ ಕನ್ನಡ ಭಾಷಾ ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿ. ಮಂಜುನಾಥ ಶೆಟ್ಟಿ ಕಣೇಬೈಲು ಪ್ರೇರಣಾ ಪ್ರಶಸ್ತಿಯನ್ನು 4 ವಿದ್ಯಾರ್ಥಿಗಳಿಗೆ ನೀಡಲಾಗುವುದು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಪತಿ ಹಳಗುಂದ ಸಮಾರೋಪ ನುಡಿ ಆಡಲಿದ್ದಾರೆ ಎಂದು ಅವರು ತಿಳಿಸಿದರು. 

ಗೋಷ್ಠಿಯಲ್ಲಿ ಸಾಹಿತ್ಯ ಸಮ್ಮೇಳನದ ಸಂಪನ್ಮೂಲ ಸಮಿತಿ ಅಧ್ಯಕ್ಷ ಎನ್.ಪಿ. ರಮೇಶ್, ಗೌರವಾಧ್ಯಕ್ಷ ಎಚ್.ಇ. ದಿವಾಕರ, ಸಾಹಿತ್ಯ ಪರಿಷತ್‌ನ ಎಚ್.ಇ. ಮಹೇಶ್, ಸುನಿಲ್ ಕುಮಾರ್, ಭಾಗ್ಯ ನಂಜುಂಡಸ್ವಾಮಿ, ನಂದಿನಿ ಆಲಂದೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.