ನರಸಿಂಹರಾಜಪುರ (ಚಿಕ್ಕಮಗಳೂರು): ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಹಳ್ಳ, ಸಂಕ್ಸೆ, ಗುಂಡುವಾನಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆಹಾನಿಗೆ ಕಾರಣವಾಗಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.
ಸಕ್ರೆಬೈಲು ಮತ್ತು ದುಬಾರೆಯಿಂದ 6 ಕುಮ್ಕಿ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. 18ರಿಂದ 20 ವರ್ಷ ವಯಸ್ಸಿನ ಗಂಡಾನೆ ಗುಂಡವಾನೆ ಬಳಿ ಸೆರೆ ಸಿಕ್ಕಿದೆ. ಕಾರ್ಯಾಚರಣೆ ವೇಳೆ ಮಾವುತ ತೌಫೀಕ್ ಎಂಬುವರಿಗೆ ಗಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.