ADVERTISEMENT

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಕೆ.ಜೆ. ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
<div class="paragraphs"><p>ಕೆ.ಜೆ. ಜಾರ್ಜ್‌</p></div>

ಕೆ.ಜೆ. ಜಾರ್ಜ್‌

   

ಚಿಕ್ಕಮಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.

ವಿದ್ಯುತ್ ಬೇಡಿಕೆ 19 ಸಾವಿರ ಮೆಗಾವ್ಯಾಟ್ ತನಕ ಹೋಗಿದೆ. ಈವರೆಗೆ ಇಷ್ಟು ಪ್ರಮಾಣದ ಬೇಡಿಕೆ ಇರಲಿಲ್ಲ. ಆದ್ದರಿಂದ 56 ಹೊಸ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ವರ್ಷ 100 ಹೊಸ ಸಬ್ ಸ್ಟೇಷನ್ ತೆರೆಯಲಾಗುವುದು ಎಂದು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದರು.

ADVERTISEMENT

ಮಧುಬಲೆ(ಹನಿಟ್ರ್ಯಾಪ್) ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೈ ಮುಗಿದು, ‘ಈ ವಿಷಯ ಕೇಳಬೇಡಿ, ನನಗೆ ಸಂಬಂಧ ಇಲ್ಲ. ಸದನದಲ್ಲಿ ಮೊದಲ ಪ್ರಸ್ತಾಪಿಸಿರುವುದು ಯತ್ನಾಳ ಅವರು. ಅದಕ್ಕೆ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ತನಿಖೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಅಲ್ಲಿಯ ತನಕ ಕಾಯಬೇಕಲ್ಲವೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.