ADVERTISEMENT

ನೊಳಂಬ ಸಮಾಜ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಕಾರ್ಯಕ್ರಮ 24ರಂದು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:58 IST
Last Updated 3 ಜುಲೈ 2022, 1:58 IST
ಅಜ್ಜಂಪುರದಲ್ಲಿ ಪ್ರತಿಭಾ ಪುರಸ್ಕಾರ ಸಂಬಂದ ನಡೆದ ಪೂರ್ವಭಾವಿ ಸಭೆಯಲ್ಲಿ ಗುರುಸಿದ್ದರಾಮೇಶ್ವರ ಉಪ ಸಮಿತಿ ಅಧ್ಯಕ್ಷ ಎಸ್.ಎಂ.ನಾಗರಾಜ್ ಮತ್ತು ಸದಸ್ಯರು ಹಾಜರಿದ್ದರು.
ಅಜ್ಜಂಪುರದಲ್ಲಿ ಪ್ರತಿಭಾ ಪುರಸ್ಕಾರ ಸಂಬಂದ ನಡೆದ ಪೂರ್ವಭಾವಿ ಸಭೆಯಲ್ಲಿ ಗುರುಸಿದ್ದರಾಮೇಶ್ವರ ಉಪ ಸಮಿತಿ ಅಧ್ಯಕ್ಷ ಎಸ್.ಎಂ.ನಾಗರಾಜ್ ಮತ್ತು ಸದಸ್ಯರು ಹಾಜರಿದ್ದರು.   

ಅಜ್ಜಂಪುರ: ‘ರಾಜ್ಯ ನೊಳಂಬ ಲಿಂಗಾಯಿತ ಸಂಘ ವತಿಯಿಂದ ಜಿಲ್ಲೆಯ ನೊಳಂಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ’ ಎಂದು ಪಟ್ಟಣದ ಗುರುಸಿದ್ದರಾಮೇಶ್ವರ ಉಪ ಸಮಿತಿ ಅಧ್ಯಕ್ಷ ಎಸ್.ಎಂ.ನಾಗರಾಜ್ ತಿಳಿಸಿದರು.

ಪ್ರತಿಭಾ ಪುರಸ್ಕಾರ ಗುರುಸಿದ್ದ ರಾಮೇಶ್ವರ ಸಮುದಾಯ ಭವನದಲ್ಲಿ ಇದೇ 24ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದ್ದು, ಅತಿಥಿಗಳಾಗಿ ಸಚಿವ ಮಾಧುಸ್ವಾಮಿ, ಬೇಲೂರು ಶಾಸಕ ಲಿಂಗೇಶ್ ಭಾಗವಹಿಸಲಿದ್ದಾರೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಶೇ 90 ಹಾಗೂ ಪಿಯುಸಿಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ ನೊಳಂಬ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ ನಕಲಿನೊಂದಿಗೆ ಭಾವಚಿತ್ರ ಲಗತ್ತಿಸಿ, ಇದೇ 20 ರೊಳಗೆ ಗುರುಸಿದ್ದರಾಮೇಶ್ವರ ಉಪಸಮಿತಿ ಕಾರ್ಯಾಲಯ, ಗುರುಸಿದ್ದರಾಮೇಶ್ವರ ಸಮುದಾಯ ಭವನ. ಬೀರೂರು ರಸ್ತೆ. ಅಜ್ಜಂಪುರ ವಿಳಾಸಕ್ಕೆ ಅಂಚೆ ಮೂಲಕ ಕಳಿಸುವಂತೆ ಮನವಿ ಮಾಡಿದರು.

ADVERTISEMENT

ಗುರು ಸಿದ್ದರಾಮೇಶ್ವರ ಉಪ ಸಮಿತಿ ಅಧ್ಯಕ್ಷ ಬಸಪ್ಪ, ಕಾರ್ಯದರ್ಶಿ ಎಂ.ಹೊಸಹಳ್ಳಿ ಸಿದ್ರಾಮಪ್ಪ, ಬೇಗೂರು ಸಿದ್ರಾಮಪ್ಪ, ನಾಗೇನಹಳ್ಳಿ ಜಗದೀಶ್, ಅಂಕುಶ್ ಕುಮಾರ್, ಟಿವಿಎಸ್ ಸಿದ್ರಾಮಪ್ಪ, ಎರೇಹಳ್ಳಿ ಮಹೇಶ್ವರಪ್ಪ, ಮಲ್ಲೇಶಪ್ಪ ಇದ್ದರು. ಮಾಹಿತಿಗೆ ಮೊಬೈಲ್‌ 97414 41518, 81970 97132, 94486 57935.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.