ADVERTISEMENT

ಪೋಷಕರು ಮಕ್ಕಳಿಗೆ ವಚನಗಳನ್ನು ಹೇಳಿಕೊಡಬೇಕು: ಪಂಡಿತಾರಾಧ್ಯ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:41 IST
Last Updated 8 ಜೂನ್ 2025, 15:41 IST
ತರೀಕೆರೆ ಶರಣರ ಬಳಗ, ಶರಣೆ ಅಕ್ಕನಾಗಲಾಂಬಿಕಾ ಸಮುದಾಯ ಸಮಿತಿ ವತಿಯಿಂದ ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ನಡೆದ ಅಕ್ಕನಾಗಲಾಂಬಿಕೆ ಅವರ ವಚನ ಫಲಕಗಳ ಅನಾವರಣ ಮತ್ತು ಬಸವ ಸ್ಮರಣೋತ್ಸವದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿದರು
ತರೀಕೆರೆ ಶರಣರ ಬಳಗ, ಶರಣೆ ಅಕ್ಕನಾಗಲಾಂಬಿಕಾ ಸಮುದಾಯ ಸಮಿತಿ ವತಿಯಿಂದ ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ನಡೆದ ಅಕ್ಕನಾಗಲಾಂಬಿಕೆ ಅವರ ವಚನ ಫಲಕಗಳ ಅನಾವರಣ ಮತ್ತು ಬಸವ ಸ್ಮರಣೋತ್ಸವದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿದರು   

ತರೀಕೆರೆ: ಪೋಷಕರು ವಚನಗಳನ್ನು ಕಲಿತು, ಮಕ್ಕಳಿಗೂ ಹೇಳಿಕೊಡಬೇಕು ಎಂದು ಸಾಣೆಹಳ್ಳಿ ತರಳಬಾಳು ಶಾಖಾ ಮಠ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಲಹೆ ನೀಡಿದರು.

ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ತರೀಕೆರೆ ಶರಣರ ಬಳಗ, ಶರಣೆ ಅಕ್ಕನಾಗಲಾಂಬಿಕಾ ಸಮುದಾಯ ಸಮಿತಿ ವತಿಯಿಂದ ನಡೆದ ಅಕ್ಕನಾಗಲಾಂಬಿಕೆ ಅವರ ವಚನ ಫಲಕಗಳ ಅನಾವರಣ ಮತ್ತು ಬಸವ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರು ವಚನಗಳ ರಕ್ಷಣೆಗೆ ಹೋರಾಟ ಮಾಡಿದರು. ಅಕ್ಕನಾಗಮ್ಮನವರು ಬಸವಣ್ಣನವರ ಬದುಕಿಗೆ ಬೆನ್ನೆಲುಬಾಗಿ ನಿಂತವರು. ಬಾಲ್ಯದಿಂದಲೇ ಬಸವಣ್ಣನವರನ್ನು ಸಲುಹಿದ ಮಹಾತಾಯಿ ಅಕ್ಕನಾಗಮ್ಮ. ವಚನ ಸಾಹಿತ್ಯವನ್ನು ಉಳಿಸುವುದಕ್ಕಾಗಿ ಕಲ್ಯಾಣದಿಂದ ಹೊರಟು ತರೀಕೆರೆಗೆ ಬಂದು ನೆಲಸಿದರು. ಇಲ್ಲಿಯೇ ಅನುಭವ ಮಂಟಪ ಸ್ಥಾಪಿಸಿದರು ಎಂದರು.

ADVERTISEMENT

ಈ ಸ್ಥಳ ಅಭಿವೃದ್ಧಿಗೆ ಹಣಕಾಸಿನ ತೊಂದರೆ ಇದೆ. ಸಮುದಾಯ ಭವನದಲ್ಲಿ ಅತಿಥಿ ಗೃಹ, ಮೇಲ್ಮಹಡಿ, ಗ್ರಂಥಾಲಯ, ಪ್ರಾರ್ಥನಾ ಮಂದಿರ ನಿರ್ಮಿಸಬೇಕು. ಎಲ್ಲರೂ ಆರ್ಥಿಕ ನೆರವು ನೀಡಿ ಸಹಕರಿಸಬೇಕು. ಜೂನ್ 15‌ರಂದು ಸಾಣೆಹಳ್ಳಿಯಲ್ಲಿ ವಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ವಾಮಿಗಳಿಗೂ ವಚನ ಸ್ಪರ್ಧೆ ಇದೆ. ಎಲ್ಲರೂ ವಚನ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಎನ್‌.ಎಸ್‌. ಜಯಣ್ಣ ಮಾತನಾಡಿ, ಅಕ್ಕನಾಗಮ್ಮನವರ ವಚನಗಳ ತಿರುಳು ಜನಸಾಮಾನ್ಯರಿಗೆ ಅರ್ಥವಾಗಬೇಕು. ವಚನಗಳ ಸಾರವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಚೇತನಗೌಡ ಮಾತನಾಡಿದರು. ಶರಣ ಚಂದ್ರಶೇಖರ್‌ ನೇರಲಕೆರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ವಿ. ಮಂಜುನಾಥ್, ಭದ್ರಾವತಿ ರಾಷ್ಟ್ರೀಯ ಬಸವದಳ ಸುಮಾ ಸುನಿಲ್ ಉಪನ್ಯಾಸ ನೀಡಿದರು. ಅಕ್ಕನಾಗಲಾಂಬಿಕೆ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಶರಣ ರಂಗಪ್ಪ, ಅಜ್ಜಂಪುರ ಎ.ಸಿ. ಚಂದ್ರಪ್ಪ, ಗಂಗಾಧರಪ್ಪ, ಚೆನ್ನಯ್ಯ, ಧರಣೇಶ್, ಪ್ರಸನ್ನ ಕುಮಾರ್, ಚಂದ್ರಶೇಖರ್, ಎ.ಸಿ. ನಾಗರಾಜ್, ಟಿ.ಆರ್. ಮಂಜುನಾಥ್, ಬಸವರಾಜ್, ಕವಿತ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.