ADVERTISEMENT

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಆರ್.ಧ್ರುವನಾರಾಯಣ ಆರೋಪ

ಕಾಂಗ್ರೆಸ್‌ನ ಆರೋಗ್ಯ ಹಸ್ತದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 6:33 IST
Last Updated 31 ಆಗಸ್ಟ್ 2020, 6:33 IST
ಕಡೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋ‍ಗ್ಯಹಸ್ತ ವಾರಿಯರ್ಸ್ ತರಬೇತಿ ಶಿಬಿರದಲ್ಲಿ ಕಾಂಗ್ರೆಸ್‌ನ ಆರೋಗ್ಯ ಹಸ್ತದ ಅಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿದರು.
ಕಡೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋ‍ಗ್ಯಹಸ್ತ ವಾರಿಯರ್ಸ್ ತರಬೇತಿ ಶಿಬಿರದಲ್ಲಿ ಕಾಂಗ್ರೆಸ್‌ನ ಆರೋಗ್ಯ ಹಸ್ತದ ಅಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿದರು.   

ಕಡೂರು: ‘ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದು ಕಾಂಗ್ರೆಸ್‌ನ ಆರೋಗ್ಯ ಹಸ್ತದ ಅಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.

ಕಡೂರಿನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಹಸ್ತ ವಾರಿಯರ್ಸ್ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‌‘ಆ‍ರಂಭದಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದು ಜನಜೀವನ ಸಂಕಷ್ಟಕ್ಕೊಳಗಾಯಿತು. ಆದರೆ, ಕೊರೊನಾ ನಿಯಂತ್ರಣಕ್ಕೆ ಬರ ಲಿಲ್ಲ. ಸರ್ಕಾರಗಳು ನೀಡಿದ್ದನ್ನೇ ಪಕ್ಷದ ಚಿನ್ಹೆ ಹಾಕಿಕೊಂಡು ಬಿಜೆಪಿ ಪ್ರಚಾರ ಪಡೆಯಿತು. ಆದರೆ, ಕಾಂಗ್ರೆಸ್ ಪಕ್ಷ ಸ್ವಂತ ಹಣದಿಂದ ಸಂಕಷ್ಟಕ್ಕೊಳಗಾದವರ ಬೆನ್ನಿಗೆ ನಿಂತಿದೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರಂತೆ ವಾರಿಯರ್ಸ್‌ಗಳನ್ನು ನೇಮಿಸಲಾಗಿದೆ. ಅವರಿಗೆ ತರಬೇತಿ ನೀಡಲಾಗಿದ್ದು, ಕೊರೊನಾ ತಪಾಸಣೆ ಮಾಡಿ ಸೋಂಕಿತರು ಕಂಡುಬಂದರೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ವಾರಿಯರ್ಸ್ ಗಳು ಸೇವಾ ಮನೋಭಾವ
ದಿಂದ ಈ ಕಾರ್ಯ ಮಾಡಲಿದ್ದಾರೆ. ಕೊರೊನಾ ಸೋಂಕಿತರ ಜೊತೆಯಿದ್ದು ಪಕ್ಷ ನೈತಿಕ ಸ್ಥೈರ್ಯ ನೀಡಲಿದೆ’ ಎಂದರು.

‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದರ ಬದಲಿಗೆ ಭಾವನಾ ತ್ಮಕವಾಗಿ, ಧರ್ಮಾಧಾರಿತವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಚೆಲ್ಲಾಟವಾಡುತ್ತಿವೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವವೇ ಇಲ್ಲದಂತಾಗಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ‍ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ಉಪಾಧ್ಯಕ್ಷರಾದ ಕೆ.ಎಂ.ವಿನಾಯಕ, ಪಂಚನಹಳ್ಳಿ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಎಂ.ಎಚ್.ಚಂದ್ರಪ್ಪ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಚಂದ್ರಮೌಳಿ ಮತ್ತು ಆಸಂದಿ ಕಲ್ಲೇಶ್, ತರಬೇತುದಾರರಾದ ಡಾ.ಮಧುಸೂಧನ್, ಡಾ.ನವೀನ್ ಇದ್ದರು.

ಅಂತರ ಮಾಯ: ವಾರಿಯರ್ಸ್ ತರಬೇತಿ ಶಿಬಿರದಲ್ಲಿ ಯಾವುದೇ ಅಂತರ ಕಾಪಾಡುವಿಕೆಯ ಪ್ರಯತ್ನವೇ ಕಾಣಲಿಲ್ಲ.

ಇಬ್ಬರು ಮಾಜಿ ಸಂಸದರೂ ಈ ಬಗ್ಗೆ ಮಾತನಾಡಲಿಲ್ಲ. ಕನಿಷ್ಠ ಮುಂಜಾಗರೂಕತೆಯೇ ಮಾಯ ವಾದದ್ದು ಹಲವರ ಅಸಮಾಧಾನಕ್ಕೂ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.