ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲೆಯಲ್ಲಿ ಬಲಗೊಳ್ಳುತ್ತಿದ್ದು, ಇದನ್ನು ಇನ್ನಷ್ಟು ಸಧೃಡಗೊಳಿಸಲು ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್ ಹೇಳಿದರು.
ಸಂಘಟನೆಯ ಜಿಲ್ಲಾ ಸಮಿತಿ ಗೌರವ ಅಧ್ಯಕ್ಷರಾಗಿ ಎಂ.ಸಿ.ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಶಿವಕುಮಾರ್ ಹಿರೇಮಗಳೂರು, ಪುಟ್ಟಸ್ವಾಮಿಗೌಡ ಮೂಡಿಗೆರೆ, ಕಾರ್ಯಾಧ್ಯಕ್ಷರಾಗಿ ದಯಾನಂದ್ ಕಡೂರು, ಬಸವರಾಜ್ ಎನ್.ಆರ್.ಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಆನಂತ ಪದ್ಮನಾಭ, ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಭಾರತಿ, ಹಿರಿಯ ಉಪಾಧ್ಯಕ್ಷರಾಗಿ ಚಂದ್ರೇಗೌಡ ಕೆಸವಿನ ಮನೆ, ಕೃಷ್ಣಯ್ಯಗೌಡ ಕೊಪ್ಪ, ಕಾರ್ಯದರ್ಶಿಯಾಗಿ ವಿ.ಎಲ್.ಛಾಯಪತಿ, ಖಜಾಂಚಿಯಾಗಿ ಲೋಕೇಶ್, ಸಂಘಟನಾ ಕಾರ್ಯದರ್ಶಿ ಉಮೇಶ್ ಎಚ್.ಡಿ, ಜಯರಾಮೇಗೌಡ, ಉಪಾಧ್ಯಕ್ಷರಾಗಿ ಹಿರಿಯಣ್ಣಗೌಡ, ಸಹಕಾರ್ಯದರ್ಶಿ ರಮೇಶ್, ಜಿಲ್ಲಾ ವಕ್ತಾರರಾಗಿ ಟಿ.ಎ.ಮಂಜು, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಪರಮೇಶ್, ವಿಜಯಕುಮಾರ್, ದೇವರಾಜ್ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ರೈತ ಸಂಘದೊಂದಿಗೆ ಮಯೂರ ಯುವ ಸೇನೆ ವಿಲೀನಗೊಂಡಿದೆ. 60 ಯುವಕರು ರೈತ ಸಂಘದಲ್ಲಿ ಸಕ್ರಿಯವಾಗಿದ್ದು, ಜಿಲ್ಲಾ ಸಮಿತಿಗೆ ಬಲ ಬಂದಂತಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಉಪಾಧ್ಯಕ್ಷ ಶಿವಕುಮಾರ್ ಹಿರೇಮಗಳೂರು, ಖಜಾಂಚಿ ಲೋಕೇಶ್, ಸಂಘಟನಾ ಕಾರ್ಯದರ್ಶಿ ಉಮೇಶ್ ಎಚ್.ಡಿ., ಮಯೂರ ಯುವ ಸೇನೆ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಸಚಿನ್, ಸ್ವಾಗತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.