
ಬಾಳೆಹೊನ್ನೂರು: ಲಿಂ. ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವ ಸಮಾರಂಭಕ್ಕೆ ರಂಭಾಪುರಿ ಪೀಠ ನವವಧುವಿನಂತೆ ಸಿಂಗಾರಗೊಂಡಿದ್ದು ಆವರಣದಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದೆ.
ಪಂಚ ಪೀಠಾಧೀಶರ ಸಾನ್ನಿಧ್ಯದಲ್ಲಿ ನ.27ರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಎಲ್ಲೆಡೆಯಿಂದ ಭಕ್ತರು ಪೀಠಕ್ಕೆ ಆಗಮಿಸುತ್ತಿದ್ದು ಎಲ್ಲಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ರಂಭಾಪುರಿ ಸ್ವಾಮೀಜಿ ಒಂದು ವಾರದಿಂದ ಮಠದಲ್ಲೇ ಉಳಿದುಕೊಂಡು ಎಲ್ಲಾ ವ್ಯವಸ್ಥೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪೀಠಕ್ಕೆ ಆಗಮಿಸುವ ಪಂಚ ಪೀಠಾದೀಶರ ವಾಸ್ತವ್ಯಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಮೈಸೂರಿನ ಸಂಸದ ಯುವರಾಜ್ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಮೊದಲ ಬಾರಿಗೆ ಪೀಠಕ್ಕೆ ಆಗಮಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಭಕ್ರರ ದಾಸೋಹಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕಡೆನಂದಿಹಳ್ಳಿ ಮಳೆಮಲ್ಲೇಶ್ವರ ಸ್ವಾಮಿ ಜಾಗೃತ ಕ್ಷೇತ್ರದಿಂದ ವಿವಿಧ ಶಿವಾಚಾರ್ಯರು ಹೊರಟ ಪಾದಯಾತ್ರೆ 171 ಕಿಮೀ ಕ್ರಮಿಸಿ ಬೆಳಿಗ್ಗೆ ರಂಭಾಪುರಿ ಪೀಠಕ್ಕೆ ಆಗಮಿಸಲಿದ್ದು,ಅವರ ಸ್ವಾಗತಕ್ಕೆ ಸಕಲ ಸಿದ್ದತೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.