ನರಸಿಂಹರಾಜಪುರ: ಇಲ್ಲಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವೂರು ಗ್ರಾಮದ ಮೀನುಕ್ಯಾಂಪ್‌ನಲ್ಲಿ ಸ್ಮಶಾನ ಇಲ್ಲದೇ ಅಲ್ಲಿನ ನಿವಾಸಿಗಳು ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದು, ಸ್ಮಶಾನಕ್ಕಾಗಿ ಜಾಗವನ್ನು ಗುರುತಿಸಿ ಮಂಜೂರು ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಹಶೀಲ್ದಾರ್‌ಗೆ ಶನಿವಾರ ಪತ್ರ ಬರೆದಿದ್ದಾರೆ.
ರಾವೂರು ಗ್ರಾಮದ ಮೀನುಕ್ಯಾಂಪ್‌ನಲ್ಲಿ ಸ್ಮಶಾನ ಇಲ್ಲದೇ ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಆಗಸ್ಟ್ 25ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿ ಆಧರಿಸಿ ಪಿಡಿಒ ಪತ್ರ ಬರೆದಿದ್ದಾರೆ.
ರಾವೂರು ಗ್ರಾಮದ ಮೀನುಕ್ಯಾಂಪ್‌ನಲ್ಲಿ ಸುಮಾರು 130 ಮನೆಗಳಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆದರೆ ಈ ಗ್ರಾಮಸ್ಥರಿಗೆ ಸ್ಮಶಾನ ಇಲ್ಲವಾಗಿದ್ದು ಗ್ರಾಮವು ಭದ್ರಾ ಹಿನ್ನೀರಿನ ತಟದಲ್ಲಿದ್ದು ಮಳೆಗಾಲದಲ್ಲಿ ಅಣೆಕಟ್ಟು ತುಂಬಿ ಹಿನ್ನೀರು ಆವರಿಸಿಕೊಳ್ಳುವುದರಿಂದ ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಗ್ರಾಮಸ್ಥರು ಕೋರಿದ್ದಾರೆ. ಈ ಹಿಂದೆ ಹಳೇಮಾಕೋಡು ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದ್ದು ಆದರೆ ಆ ಜಾಗವು ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿದೆ. ಆದ್ದರಿಂದ ರಾವೂರು ಗ್ರಾಮದ ಮೀನು ಕ್ಯಾಂಪ್ ನಿವಾಸಿಗಳಿಗೆ 1 ಎಕರೆ ಸೂಕ್ತ ಕಂದಾಯ ಜಾಗ ಗುರುತಿಸಿ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.