ADVERTISEMENT

ನರಸಿಂಹರಾಜಪುರ: ಮುಖ್ಯರಸ್ತೆಗೆ ರಸ್ತೆ ವಿಭಜಕ ಅಳವಡಿಸಲು ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:50 IST
Last Updated 15 ಜನವರಿ 2026, 4:50 IST
ನರಸಿಂಹರಾಜಪುರದಲ್ಲಿ ರಸ್ತೆ ವಿಸ್ತರಣೆಯಾಗಿರುವ ಸುಂಕದಕಟ್ಟೆಯಿಂದ ಮೆಸ್ಕಾಂ ಇಲಾಖೆಯವರೆಗೆ ರಸ್ತೆ ವಿಭಜಕ ಅಳವಡಿಸದೆ ಇರುವುದು
ನರಸಿಂಹರಾಜಪುರದಲ್ಲಿ ರಸ್ತೆ ವಿಸ್ತರಣೆಯಾಗಿರುವ ಸುಂಕದಕಟ್ಟೆಯಿಂದ ಮೆಸ್ಕಾಂ ಇಲಾಖೆಯವರೆಗೆ ರಸ್ತೆ ವಿಭಜಕ ಅಳವಡಿಸದೆ ಇರುವುದು   

ನರಸಿಂಹರಾಜಪುರ: ಪಟ್ಟಣದ ಸುಂಕದಕಟ್ಟೆಯಿಂದ ಸಿಂಸೆ ಗ್ರಾಮದವರೆಗೆ ರಸ್ತೆ ವಿಸ್ತರಣೆಯಾಗಿದ್ದು, ಈ ಭಾಗದಲ್ಲಿ ಸಿಂಸೆ ಗ್ರಾಮದಿಂದ ಮೆಸ್ಕಾಂ ಕಚೇರಿಯ ಸಮೀಪದವರೆಗೆ ರಸ್ತೆ ವಿಭಜಕ ಅಳವಡಿಸಲಾಗಿದೆ. ಅಲ್ಲಿಂದ ಸುಂಕದಕಟ್ಟೆವರೆಗೆ ರಸ್ತೆ ವಿಭಜಕ ಅಳವಡಿಸಲಾಗಿಲ್ಲ. ಆದ್ದರಿಂದ ಇಲ್ಲಿ ರಸ್ತೆ ವಿಭಜಕ ಅಳವಡಿಸಬೇಕು. 

ರಸ್ತೆ ವಿಭಜಕ ಅಳವಡಿಸದೆ ಇರುವ ಭಾಗದಲ್ಲಿ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ, ಜೀವನ್ ಜ್ಯೋತಿ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಮಕ್ಕಳು ರಸ್ತೆ ದಾಟುವಾಗ ಸಾಕಷ್ಟು ಪರದಾಡುವ ಸ್ಥಿತಿಯಿದೆ. ಈ ಭಾಗದಲ್ಲಿ ವಾಹನಗಳನ್ನು ವೇಗವಾಗಿ ಓಡಿಸುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ರಸ್ತೆ ವಿಭಜಕವನ್ನು ಅಳವಡಿಸುವತ್ತ ಲೋಕೋಪಯೋಗಿ ಇಲಾಖೆಯವರು ಗಮನಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT