ADVERTISEMENT

ತರೀಕೆರೆ: ಸಿಬ್ಬಂದಿ, ಮೂಲ ಸೌಕರ್ಯ ಕೊರತೆ

ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ: ದಲ್ಲಾಳಿಗಳ ಹಾವಳಿಯ ಆರೋಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:25 IST
Last Updated 29 ನವೆಂಬರ್ 2022, 16:25 IST
ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ
ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ   

ತರೀಕೆರೆ: ಪಟ್ಟಣದ ರೈತ ಭವನದ ಬಾಡಿಗೆ ಕಟ್ಟಡದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ 2016ರ ಜೂನ್‌ನಿಂದ ಆರಂಭಗೊಂಡಿದ್ದು, ನೌಕರರ ಸಮಸ್ಯೆ, ಸ್ವಂತ ಕಟ್ಟಡ, ದಲ್ಲಾಳಿಗಳ ಹಾವಳಿ, ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಆದರೆ, ದಲ್ಲಾಳಿ ಅಬ್ಬರ ಹೆಚ್ಚಿದೆ ಎಂಬುದು ಜನರ ದೂರು.

ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯು ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಘನ ವಾಹನ ಹೊರತು ಪಡಿಸಿ 16,298 ವಾಹನಗಳು ನೋಂದಣಿಯಾಗಿವೆ. ವಾರ್ಷಿಕ ₹23.44 ಲಕ್ಷ ರಾಜಸ್ವ ಹೊಂದಿದೆ. ಆದರೆ, ಇನ್ನೂ ಸ್ವಂತ ಕಟ್ಟಡ ಇಲ್ಲ. ಇರುವ ಕಟ್ಟಡ ಶಿಥಿಲವಾಗಿದೆ. ಇಲ್ಲಿ ಸಾರಿಗೆಗೆ ಸಂಬಂಧಿಸಿದ 33 ಸೇವಾ ಸೌಲಭ್ಯಗಳಿವೆ.

ನೌಕರರ ಕೊರತೆ: ಒಟ್ಟು 22 ಹುದ್ದೆಗಳಿದ್ದು, ಪ್ರಭಾರ ಸಹಾಯಕ ಪ್ರಾದೇಶಿಕ ಅಧಿಕಾರಿ, ಇಬ್ಬರು ಕಚೇರಿ ಅಧೀಕ್ಷಕರು, ಇಬ್ಬರು ಮೋಟರ್ ವಾಹನ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಒಬ್ಬರು ದ್ವಿತೀಯ ದರ್ಜೆ ಸಹಾಯಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಡಿ ದರ್ಜೆ ನೌಕರರು, ಮೋಟರ್ ವಾಹನ ನಿರೀಕ್ಷಕರು, ಚಾಲಕರು ಸೇರಿದಂತೆ 15 ಹುದ್ದೆಗಳು ಖಾಲಿ ಇವೆ.

ನೌಕರರ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇಲ್ಲಿನ ಸಿಬ್ಬಂದಿ ಅಳಲು. ಕುಡಿಯುವ ನೀರು, ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಮೂಲ ಭೂತ ಸೌಲಭ್ಯಗಳು ಇಲ್ಲ.

‘ಇಲ್ಲಿ ದಲ್ಲಾಳಿಗಳ ಅಬ್ಬರವೇ ಹೆಚ್ಚಾಗಿದೆ. ಸಾಮಾನ್ಯ ಜನರ ಗೋಳು ಹೇಳತೀರದಾಗಿದೆ’ ಎಂದು ಸ್ಥಳೀಯ ಟಿ.ಜಿ.ರಾಜು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.