ADVERTISEMENT

ಪಠ್ಯೇತರ ಚಟುವಟಿಕೆ: ಬುದ್ಧಿಶಕ್ತಿ ಹೆಚ್ಚಳಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:58 IST
Last Updated 20 ಸೆಪ್ಟೆಂಬರ್ 2022, 4:58 IST
ಬಣಕಲ್ ಪ್ರೌಢಶಾಲೆಯ ಅಟಲ್ ಟಿಂಕರ್ ಲ್ಯಾಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ವೈಜ್ಞಾನಿಕ ವಸ್ತುಗಳ ಬಗ್ಗೆ ವಿವರಣೆ ನೀಡಿದರು.
ಬಣಕಲ್ ಪ್ರೌಢಶಾಲೆಯ ಅಟಲ್ ಟಿಂಕರ್ ಲ್ಯಾಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ವೈಜ್ಞಾನಿಕ ವಸ್ತುಗಳ ಬಗ್ಗೆ ವಿವರಣೆ ನೀಡಿದರು.   

ಕೊಟ್ಟಿಗೆಹಾರ: ವಿದ್ಯಾರ್ಥಿಗಳಿಗೆ ಬರಿ ಪಠ್ಯ ಪುಸ್ತಕಗಳೇ ಜೀವಾಳವಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ. ಪ್ರತಿಭೆ ಬೆಳಗಿಸುವುದಕ್ಕೆ ಇಂತಹ ವೈಜ್ಞಾನಿಕ ಚಟುವಟಿಕೆ ಸಹಕಾರಿಯಾಗಿದೆ ಎಂದು ಬಣಕಲ್ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ. ಜಯರಾಮ್ ಗೌಡ ಹೇಳಿದರು.

ಸೋಮವಾರ ಬಣಕಲ್ ಪ್ರೌಢಶಾಲೆಯ ಅಟಲ್ ಟಿಂಕರ್ ಲ್ಯಾಬ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ‘ಮಕ್ಕಳಿಗೆ ರಚನಾತ್ಮಕ ಹಾಗೂ ಕ್ರಿಯಾತ್ಮಕ ಮನೋಭಾವ ಬೆಳೆಸಿ ದೇಶಕ್ಕೆ ಯುವ ವಿಜ್ಞಾನಿಗಳ ಕೊಡುಗೆ ನೀಡುವ ಅಗತ್ಯವಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿ ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿದವರು’ ಎಂದರು.

ವಿಜ್ಞಾನ ಶಿಕ್ಷಕರಾದ ವಲ್ಸಮ್ಮ ಪೌಲ್ಸನ್ ಹಾಗೂ ಅಪೂರ್ವ ಸಹಕಾರದೊಂದಿಗೆ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳು ತಾವು ತಯಾರಿಸಿದ ವೈಜ್ಞಾನಿಕ ವಸ್ತುಗಳ ವಿವರಣೆಯನ್ನು ನೀಡಿದರು. ಮುಖ್ಯ ಶಿಕ್ಷಕ ಪಿ.ವಾಸುದೇವ್, ಸಹಶಿಕ್ಷಕರಾದ ಜಿ.ಎಚ್.ಶ್ರೀನಿವಾಸ್, ಎ.ಎನ್.ಪ್ರತೀಕ್, ಅಕ್ರಂ ಪಾಷಾ, ಪ್ರವೀಣ್ ಕುಮಾರ್, ಉಮಾಮಹೇಶ್, ಚೈತ್ರಾ ರೋಹಿತ್, ಲಲಿತಾ, ಬೋರಕ್ಕ, ಸುಪ್ರಿಯಾ ಡಿಕುನ್ನ, ಮುಬಾಸೀರ, ಸೌಮ್ಯಾ, ದಿವ್ಯಜ್ಯೋತಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.