ಶೃಂಗೇರಿ: ತಾಲ್ಲೂಕಿನಾದ್ಯಂತ ಮಂಗಳವಾರ ಗೌರಿ ಹಬ್ಬದ ಆಚರಣೆ ಅಂಗವಾಗಿ ಮಹಿಳೆಯರು ಬಹಳ ಶ್ರದ್ಧಾಭಕ್ತಿಯಿಂದ ಗೌರಿ ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ವಿ.ಆರ್ ಗೌರಿಶಂಕರ್ ಸಭಾಂಗಣ, ಕಾಂಚೀನಗರ, ಕಲ್ಕಟ್ಟೆ, ಆನೆಗುಂದ, ವೈಕುಂಠಪುರ, ಬೆಟ್ಟಗೆರೆ, ತೆಕ್ಕೂರು, ಕುಂಚೇಬೈಲ್, ಮೆಣಸೆ, ಹೊಳೆಕೊಪ್ಪ, ಕಾವಡಿ, ಅಡ್ಡಗದ್ದೆ, ನೆಮ್ಮಾರ್, ಮೆಣಸೆ, ವಿದ್ಯಾರಣ್ಯಪುರ ಸೇರಿದಂತೆ ಹಲವು ಕಡೆ ಗಣೇಶ ಮೂರ್ತಿಗಾಗಿ ಆಕರ್ಷಕ ಮಂಟಪ, ವಿದ್ಯುತ್ ದೀಪ ಅಳವಡಿಕೆಯ ಸಿದ್ಧತಾ ಕಾರ್ಯ ನಡೆದಿದೆ.
ಹಣ್ಣು-ಹೂ, ವಸ್ತ್ರ ಖರೀದಿ: ಪಟ್ಟಣದ ಕಟ್ಟೆಬಾಗಿಲು, ಸಂತೆ ಮಾರುಕಟ್ಟೆ, ಸ್ವಾಗತ ಮಂಟಪ ಮತ್ತು ಕುವೆಂಪು ಬಸ್ ನಿಲ್ದಾಣದ ಬಳಿ ಹೂ, ಹಣ್ಣು, ದಿನಸಿ, ತರಕಾರಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಖರೀದಿಗೆ ಜನಜಂಗುಳಿ ಇತ್ತು. ಜನರು ಹೂ ಹಣ್ಣು, ಪೂಜಾ ಸಾಮಗ್ರಿ, ಬಾಳೆಗಿಡ, ವಸ್ತ್ರಗಳನ್ನು ಖರೀದಿಸಿದರು. ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿ ಒಯ್ದರು. ಹೂವು ಹಣ್ಣು ಖರೀದಿಯು ತಡರಾತ್ರಿಯವರೆಗೂ ಮುಂದುವರೆದಿತ್ತು.
ಪಟ್ಟಣ ಪಂಚಾಯಿತಿಯ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಯ 66ನೇ ಗಣೇಶೋತ್ಸವವು ಆಗಸ್ಟ್ 27ರಿಂದ 31ರ ತನಕ ವಿ.ಆರ್ ಗೌರಿಶಂಕರ್ ಸಭಾಂಗಣದಲ್ಲಿ ನೆಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.