ADVERTISEMENT

ಸಿದ್ದರಾಮಯ್ಯ ನರಿ ಕತೆ ಹೇಳಿದರೆ ಕೇಳುವರ‍್ಯಾರು: ಸಿ.ಟಿ.ರವಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 1:21 IST
Last Updated 19 ಡಿಸೆಂಬರ್ 2020, 1:21 IST
ಸಿ.ಟಿ ರವಿ
ಸಿ.ಟಿ ರವಿ    

ಚಿಕ್ಕಮಗಳೂರು: ‘ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಆಗ ಜೆಡಿಎಸ್‌ ಜತೆ ಒಂದಾಗಿದ್ದ ಸಿದ್ದರಾಮಯ್ಯ ಈಗ ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂದು ನರಿ ಕತೆ ಹೇಳಿದರೆ ಯಾರು ಕೇಳುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌, ಬಿಜೆಪಿ ಎರಡೂ ಸೇರಿ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎರಡೂ ಪಕ್ಷ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿಯಲ್ಲೂ ಅವರು ಸೋಲು ಅನುಭವಿಸಬೇಕಾಗುತ್ತಿತ್ತು’ ಎಂದು ಚುಚ್ಚಿದರು.

‘ಸಿದ್ದರಾಮಯ್ಯ ಅವರು ಸೋಲಿಗೆ ಈಗ ಕಾರಣ ಹುಡುಕಿದ್ದಾರೆ. ಸೋಲಿಸಿದವರ ಜೊತೆ ಸೇರಿ ಅವರು ಸರ್ಕಾರ ರಚಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.