ADVERTISEMENT

ಸಿಂಸೆ: ಜಕಣಾಚಾರಿ ಸಂಸ್ಮರಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 14:00 IST
Last Updated 6 ಜನವರಿ 2025, 14:00 IST
ನರಸಿಂಹರಾಜಪುರ ತಾಲ್ಲೂಕು ಸಿಂಸೆಯ ವಿಶ್ವ ಸಮುದಾಯಭವನದಲ್ಲಿ ಭಾನುವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಎ.ಎಸ್. ಕೃಷ್ಣಯ್ಯ ಆಚಾರ್,ರಾಜೇಶ್,ಜಯಶ್ರೀಕೃಷ್ಣಯ್ಯ ಆಚಾರ್ ಪಾಲ್ಗೊಂಡಿದ್ದರು
ನರಸಿಂಹರಾಜಪುರ ತಾಲ್ಲೂಕು ಸಿಂಸೆಯ ವಿಶ್ವ ಸಮುದಾಯಭವನದಲ್ಲಿ ಭಾನುವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಎ.ಎಸ್. ಕೃಷ್ಣಯ್ಯ ಆಚಾರ್,ರಾಜೇಶ್,ಜಯಶ್ರೀಕೃಷ್ಣಯ್ಯ ಆಚಾರ್ ಪಾಲ್ಗೊಂಡಿದ್ದರು   

ಸಿಂಸೆ (ಎನ್.ಆರ್.ಪುರ): ‘ಅಮರ ಶಿಲ್ಪಿ ಜಕಣಾಚಾರಿ ಅವರು ಶಿಲ್ಪ ಕಲೆಯನ್ನು ಜಗತ್ತಿಗೆ ಪರಿಚಯಿಸಿದರು’ ಎಂದು ವಿಶ್ವ ಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಘಟಕದ ಅಧ್ಯಕ್ಷ ಎ.ಎಸ್. ಕೃಷ್ಣಯ್ಯ ಆಚಾರ್ ಹೇಳಿದರು.

ಇಲ್ಲಿನ ವಿಶ್ವ ಕರ್ಮ ಸಭಾ ಭವನದಲ್ಲಿ ಭಾನುವಾರ ನಡೆದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಇಂದಿಗೂ ಶಿಲ್ಪ ಕಲೆ ಜೀವಂತವಾಗಿದೆ ಎಂಬುದಕ್ಕೆ ಬೇಲೂರು, ಹಳೇಬೀಡು, ಸೋಮನಾಥಪುರ ಶಿಲ್ಪಗಳೇ ಸಾಕ್ಷಿಯಾಗಿವೆ. ಅಮರ ಶಿಲ್ಪಿ ಜಕಣಾಚಾರಿಯಂತೆ ಈಗಿನ ಕಾಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಶ್ವ ಕರ್ಮ ಸಮಾಜದ ಆಸ್ತಿಯಾಗಿದ್ದಾರೆ. ಸರ್ಕಾರವು ವಿಶ್ವ ಕರ್ಮ ಸಮಾಜದ ಶಿಲ್ಪಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು’ ಎಂದರು.

ADVERTISEMENT

ತಾಲ್ಲೂಕು ವಿಶ್ವ ಕರ್ಮ ಸಮಾಜದ ಅಧ್ಯಕ್ಷ ರಾಜೇಶ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ವಿಶ್ವ ಕರ್ಮ ಸಮಾಜದ ಶಿಲ್ಪಿಗಳನ್ನು ಗುರುತಿಸುವ ಕೆಲಸ ಮಾಡಲಾಗವುದು’ ಎಂದರು.

ಶಿಕ್ಷಕಿ ಸೌಖ್ಯ ಮಹೇಶ್ ಅಮರ ಶಿಲ್ಪಿ ಜಕಣಾಚಾರಿ ಅವರ ಜೀವನ ಚರಿತ್ರೆ ಓದಿದರು.

ವಿಶ್ವ ಕರ್ಮ ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್, ಇಂದಿರ ದಾಮೋದರ್, ಅರುಣ್ ಕರುಗುಂದ, ಮಂಜುನಾಥ ಆಚಾರ್ಯ ಇದ್ದರು. ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು.  ವಿಶ್ವ ಕರ್ಮ ಸೇವಾ ಸಮಾಜ ಸಂಘದ ಮಾಸಿಕ ಸಭೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.