ADVERTISEMENT

ಮೂಢ ನಂಬಿಕೆಗಳ ಆಚರಣೆ ಬೇಡ: ಸುಧೀರ್ ಜೈನ್

ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:31 IST
Last Updated 12 ಜನವರಿ 2026, 6:31 IST
ಆಲ್ದೂರು ಪಟ್ಟಣದ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು
ಆಲ್ದೂರು ಪಟ್ಟಣದ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು   

ಆಲ್ದೂರು: ಪಟ್ಟಣದ ನಾರಾಯಣ ಗುರು ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು.

ಪಂಚಾಯಿತಿ ಅಧ್ಯಕ್ಷೆ ಜುಬೇದಾ ಹಸೈನಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸುಧೀರ್ ಜೈನ್, ಯೋಜನೆಯಿಂದ ಒದಗಿಸಿರುವ ಸಾಲ ಸೌಲಭ್ಯ, ವಿದ್ಯಾರ್ಥಿವೇತನ, ನಿರ್ಗತಿಕರಿಗೆ ಒದಗಿಸಿರುವ ಮಾಸಾಶನ, ಸರ್ಕಾರಿ ಶಾಲೆಗಳಿಗೆ ಒದಗಿಸಿರುವ ಕಲಿಕೋಪಕರಣ, ಅತಿಥಿ ಶಿಕ್ಷಕರ ನೇಮಕದ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಅತಿಥಿಯಾಗಿದ್ದ ಶ್ರೀಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ್ ಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿರುವಾಗ ಯಾವುದೇ ದಾಖಲೆ, ಜಾಮೀನು ಕೇಳದೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕ ಬೆಂಬಲ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿರುವ ಯೋಜನೆ ಅತ್ಯುತ್ತಮವಾಗಿವೆ. ಟೀಕೆಗಳು ಬರುವುದು ಸಾಮಾನ್ಯ. ಆದರೆ, ಉತ್ತಮ ಕೆಲಸಗಳು ಸಮಾಜಮುಖಿಯಾಗಿದ್ದಾಗ ಅವುಗಳು ಮಾತ್ರ ಶಾಶ್ವತವಾಗಿರುತ್ತವೆ ಎಂದರು.

ಪಿಎಸ್‌ಐ ರವಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಯುವ ಪೀಳಿಗೆಗೆ ಧರ್ಮ ಮುಖ್ಯ. ಆದರೆ, ಮೂಢನಂಬಿಕೆಗಳ ಆಚರಣೆ ಬೇಡ. ಆಶ್ರಮ–ಆಶ್ರಯ ಈ ಎರಡು ಮುಖ್ಯವಾಗಿದ್ದು, ತಂದೆ ತಾಯಿ ಬಾಲ್ಯದಲ್ಲಿ ನಮಗೆಲ್ಲರಿಗೂ ಆಶ್ರಯವಾಗಿದ್ದು, ಅವರ ವೃದ್ಧಾಪ್ಯದಲ್ಲಿ ನಾವು ಅವರಿಗೆ ಆಶ್ರಮವಾಗಿ ಸೇವೆ ಸಲ್ಲಿಸಬೇಕು ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಸಾಮಾಜಿಕ ಚಿಂತಕ ಎಚ್.ಡಿ.ನಾರಾಯಣ್ ಆಚಾರ್ಯ, ಪ್ರತಿ ಮನೆಯಲ್ಲೂ ದೇವರ ಪ್ರಾರ್ಥನೆ, ನಾಮಸ್ಮರಣೆ, ಭಜನೆ, ಪ್ರತಿದಿನ ನಡೆಯಬೇಕು. ಮಕ್ಕಳಿಗೆ ಧರ್ಮ ಆಚರಣೆ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ, ಮಾದರಿ ಜೀವನದ ಕುರಿತು ಕಲಿಸಬೇಕು ಎಂದು ಹೇಳಿದರು.

ಮಹಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ರವಿಕುಮಾರ್ ಎಚ್.ಎಲ್. ಮಾತನಾಡಿದರು.

ಸ್ವಸಹಾಯ ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ನಡೆಯಿತು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಕೆ.ಎಲ್.ಕುಮಾರ್, ಸತ್ಯನಾರಾಯಣ ಪೂಜಾ ಸಮಿತಿಯ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿಗಳಾದ ವಿನೋದ, ಮಾನಸ, ಕೋಶಾಧಿಕಾರಿ ಕೆ.ಎಲ್.ರಾಜು, ಒಕ್ಕೂಟದ ಅಧ್ಯಕ್ಷರಾದ ನಂದಕುಮಾರ್, ತಿಮ್ಮಪ್ಪ, ಹರೀಶ್ ಎಂ.ಎನ್., ಶಶಿಕುಮಾರ್, ರೇಖಾ, ನಾಜಿಯಾ ಕೌಸರ್, ಶಾಂತ, ಸೇವಾ ಪ್ರತಿನಿಧಿಗಳಾದ ಭಾಗ್ಯ, ಜಯಶ್ರೀ, ಮಾನಸ, ಉಷಾ, ರಮ್ಯಾ, ಸುನಂದ, ಒಕ್ಕೂಟ, ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.