ಶೃಂಗೇರಿ: ಇಲ್ಲಿನ ಶಾರದಾ ಮಠದಲ್ಲಿ ಶಾರದಾಂಬಾ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರು ಪಾಲ್ಗೊಂಡಿದ್ದರು.
ಲಾಕ್‍ಡೌನ್ ಆದ ನಂತರ ಮೊದಲ ಬಾರಿಗೆ ಶಾರದಾ ಪೀಠದಲ್ಲಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಆನೆಗಳು, ತಟ್ಟಿರಾಯಗಳು, ಛತ್ರಿ ಚಾಮರಗಳು, ವಾದ್ಯಗೋಷ್ಠಿ ರಥೋತ್ಸವಕ್ಕೆ ಮೆರುಗು ನೀಡಿದವು. ರಸ್ತೆಯಲ್ಲಿ ಬಿಡಿಸಿದ ರಂಗವಲ್ಲಿಯ ಚಿತ್ತಾರ ಎಲ್ಲರ ಗಮನ ಸೆಳೆದವು.
ಮುಖ್ಯಬೀದಿಯಲ್ಲಿ ಸಾಗಿ ಬಂದ ಶಾರದಾಂಬಾ ರಥೋತ್ಸವದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಶಾರದಾ ಮಠದ ಅಧಿಕಾರಿಗಳಾದ ಶ್ರೀಪಾದ ರಾವ್, ಶಿವಶಂಕರ್, ದಕ್ಷಿಣಾಮೂರ್ತಿಗಳು ಹಾಗೂ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.