ADVERTISEMENT

ಆರೋಪಿಗಳು ₹ 50 ಸಾವಿರ ಬಾಂಡ್‌ ಕೋರ್ಟ್‌ಗೆ ಸಲ್ಲಿಸಲು ಆದೇಶ

ಅಂತರ್ಜಾತಿ ವಿವಾಹಿತೆಗೆ ಥಳಿತ, ಕೊಲೆ ಬೆದರಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 4:23 IST
Last Updated 23 ಜೂನ್ 2022, 4:23 IST

ಚಿಕ್ಕಮಗಳೂರು: ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ಥಳಿಸಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಗಳಾದ ರಮೇಶ ನಾಯ್ಕ, ಮಂಜಾನಾಯ್ಕ, ಚೇತನಕುಮಾರ್ ನಾಯ್ಕ

₹ 50 ಸಾವಿರ ಬಾಂಡ್‌ ಅನ್ನು ಕೋರ್ಟ್‌ಗೆ ನೀಡಬೇಕು ಎಂದು ಕಡೂರು ಜೆಎಂಎಫ್‌ಸಿ ಕೋರ್ಟ್‌ ಆದೇಶ ನೀಡಿದೆ.

ನ್ಯಾಯಾಧೀಶ ಎಂ.ಎನ್‌.ರಾಮ್‌ ಪ್ರಶಾಂತ್ ಈ ಆದೇಶ ನೀಡಿದ್ದಾರೆ.

ADVERTISEMENT

ಏನಿದು ಪ್ರಕರಣ: ಕಡೂರು ತಾಲ್ಲೂಕಿನ ಪಂಚನಹಳ್ಳಿ ಠಾಣಾ ವ್ಯಾಪ್ತಿಯ ನಿಡುವಳ್ಳಿಯ ಗಾಯತ್ರಿ ಮತ್ತು ವೈ.ಆರ್‌.ರವಿ ಅಂತರ್ಜಾತಿ ಮದುವೆಯಾಗಿದ್ದರು. ದಂಪತಿಗೆ ಮಗು ಜನಿಸಿತ್ತು. ಗಾಯತ್ರಿ ಅಜ್ಜ ಪುಟ್ಟನಾಯ್ಕ ಅವರು 2019 ಫೆ. 17ರಂದು ಬಾಣಂತನಕ್ಕೆ ಮನೆಗೆ ಕರೆದೊಯ್ದಿದ್ದರು.

ಗಾಯತ್ರಿ ಸಂಬಂಧಿಕರಾದ ರಮೇಶ ನಾಯ್ಕ, ಮಂಜಾನಾಯ್ಕ, ಚೇತನಕುಮಾರ್ ನಾಯ್ಕ ಅವರು ಅಜ್ಜನ ಮನೆಗೆ ಹೋಗದಂತೆ ಗಾಯತ್ರಿಗೆ ತಾಕೀತು ಮಾಡಿದ್ದರು. ನಿಂದಿಸಿದ್ದರು, ಚಪ್ಪಲಿಯಿಂದ ಹೊಡೆದು ಗಾಯಗೊಳಿಸಿದ್ದರು. ಇನ್ನೊಮ್ಮೆ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸರ್ಕಾರದ ಪರವಾಗಿ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯುಟರ್‌ ನಾಜಿಯಾ ಪರ್ವಿನ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.