ADVERTISEMENT

ಕಾಫಿ ಉದ್ಯಮದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ

ಕಾಫಿ ಮಂಡಳಿ ಸದಸ್ಯ ಜಿ.ಎಸ್.ಮಹಾಬಲರಾವ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:44 IST
Last Updated 3 ಅಕ್ಟೋಬರ್ 2022, 4:44 IST
ಬಾಳೆಹೊನ್ನೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಕಾಫಿ ಮಂಡಳಿಯ ನೂತನ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಜಿ.ಎಸ್.ಮಹಾಬಲರಾವ್, ಎ.ಜಿ.ದಿವಿನ್‍ರಾಜ್, ಡಾ.ಎಚ್.ಎಸ್.ಕೃಷ್ಣಾನಂದ ಅವರನ್ನು ಸನ್ಮಾನಿಸಲಾಯಿತು.
ಬಾಳೆಹೊನ್ನೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಕಾಫಿ ಮಂಡಳಿಯ ನೂತನ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಜಿ.ಎಸ್.ಮಹಾಬಲರಾವ್, ಎ.ಜಿ.ದಿವಿನ್‍ರಾಜ್, ಡಾ.ಎಚ್.ಎಸ್.ಕೃಷ್ಣಾನಂದ ಅವರನ್ನು ಸನ್ಮಾನಿಸಲಾಯಿತು.   

ಬಾಳೆಹೊನ್ನೂರು: ಕಾಫಿ ಉದ್ಯಮವು ಭಾರತದಲ್ಲಿ 10 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ನೀಡಿದೆ. ಕಾಫಿ ಉದ್ಯಮದಲ್ಲಿ ಹಲವು ಸಮಸ್ಯೆ, ಸಂಕಷ್ಟ, ಗೊಂದಲಗಳಿದ್ದು, ಅವುಗಳನ್ನು ಕಾಫಿ ದಿನಾಚರಣೆಯ ಸಂದರ್ಭದಲ್ಲಿ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಫಿ ಮಂಡಳಿ ಸದಸ್ಯ ಜಿ.ಎಸ್.ಮಹಾಬಲರಾವ್ ಹೇಳಿದರು.

ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಪಟ್ಟಣದ ದುರ್ಗಾದೇವಿ ಶರನ್ನವರಾತ್ರಿ ಉತ್ಸವದ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಕಾಫಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಫಿ ಉದ್ಯಮದ ಸಮಸ್ಯೆ ಪರಿಹಾರಕ್ಕೆ ಕಾಫಿ ಮಂಡಳಿಯ ಸದಸ್ಯರು, ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎಂದರು.

ADVERTISEMENT

ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್‍ ಕುಮಾರ್ ಮಾತನಾಡಿದರು. ಕಾಫಿ ಮಂಡಳಿಯ ನೂತನ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಜಿ.ಎಸ್.ಮಹಾಬಲರಾವ್, ಎ.ಜಿ.ದಿವಿನ್‍ರಾಜ್, ಡಾ.ಎಚ್.ಎಸ್.ಕೃಷ್ಣಾನಂದ ಅವರನ್ನು ಸನ್ಮಾನಿಸಲಾಯಿತು. ಕಾಫಿ ಉದ್ಯಮದಲ್ಲಿನ ವಿವಿಧ ಸಮಸ್ಯೆ, ಉತ್ತಮ ಕಾಫಿ ಬೆಳೆ ಹಾಗೂ ಕಾಫಿ ತಯಾರಿಕೆಯ ಬಗ್ಗೆ ತಜ್ಞರು ಮಾಹಿತಿ ನೀಡಿದರು.

ಕಾಫಿ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ.ಎಸ್.ನಾಗರಾಜ್, ದುರ್ಗಾ ಸಮಿತಿಯ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಉಪಾಧ್ಯಕ್ಷ ಶಿವರಾಮ್‍ ಶೆಟ್ಟಿ, ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ವೈ.ಮೋಹನ್‍ಕುಮಾರ್, ಚೈತನ್ಯ ವೆಂಕಿ, ಡಿ.ಎನ್.ಸುಧಾಕರ್, ಮನುಕುಮಾರ್, ಪ್ರಶಾಂತ್‍ಕುಮಾರ್, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.