ADVERTISEMENT

ಕನ್ನಡ ಉಳಿವಿಗೆ ಎಲ್ಲರೂ ಕೈಜೋಡಿಸಿ: ಟೆನ್ನಿಸ್‌ ಕೃಷ್ಣ

ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 4:21 IST
Last Updated 5 ನವೆಂಬರ್ 2022, 4:21 IST
ಚಿಕ್ಕಮಗಳೂರಿನ ಗೌರಿಕಾಲುವೆಯ ವಿದ್ಯಾಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಾಸ್ಯನಟ ಟೆನ್ನಿಸ್‌ ಕೃಷ್ಣ ಉದ್ಘಾಟಿಸಿದರು. ಮನು ಕುಮಾರ್ ರಾಜೇ ಅರಸ್ ಎಂ ಎನ್, ಕಾಫಿನಾಡು ಚಂದು ಇದ್ದರು.
ಚಿಕ್ಕಮಗಳೂರಿನ ಗೌರಿಕಾಲುವೆಯ ವಿದ್ಯಾಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಾಸ್ಯನಟ ಟೆನ್ನಿಸ್‌ ಕೃಷ್ಣ ಉದ್ಘಾಟಿಸಿದರು. ಮನು ಕುಮಾರ್ ರಾಜೇ ಅರಸ್ ಎಂ ಎನ್, ಕಾಫಿನಾಡು ಚಂದು ಇದ್ದರು.   

ಚಿಕ್ಕಮಗಳೂರು: ರಾಜ್ಯದ ಪ್ರತಿಯೊಬ್ಬರೂ ಕನ್ನಡ ನಾಡು, ನುಡಿಯ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಳ್ಳಬೇಕು. ಕನ್ನಡವನ್ನು ಉಳಿಸಿ, ಬೆಳೆಸಲು ಮುಂದಾಗಬೇಕು ಎಂದು ನಟ ಟೆನ್ನಿಸ್‌ ಕೃಷ್ಣ ಹೇಳಿದರು.

ನಗರದ ಗೌರಿಕಾಲುವೆಯ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್‍ಕುಮಾರ್ ಅಪ್ರತಿಮ ಕಲಾವಿದರು. ಅವರೊಂದಿಗೆ ತೆರೆ ಹಂಚಿಕೊಂಡ ಬಳಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಅವಕಾಶ ಲಭಿಸಿ ಜೀವನದ ಚಿತ್ರಣವೇ ಬದಲಾಯಿತು. ಪುನೀತ್‍ ರಾಜ್‍ಕುಮಾರ್ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಸ್ಮರಿಸಿದರು.

ADVERTISEMENT

ಶಾಲೆಯ ಸ್ಥಾಪಕ ಡಾ.ಅಪ್ಸರ್ ಅಹಮ್ಮದ್ ಮಾತನಾಡಿ, ರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ವೇಷಭೂಷಣ ವೇದಿಕೆಯ ಮೆರುಗು ಹೆಚ್ಚಿಸಿದೆ ಎಂದರು.

ಪುನೀತ್‍ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

***

ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ಸೇವೆ ಸಲ್ಲಿಸಿ 600ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಏಳಿಗೆಗೆ ಕನ್ನಡಿಗರ ಪ್ರೀತಿ, ಅಭಿಮಾನ ಕಾರಣ.

ಟೆನ್ನಿಸ್‌ ಕೃಷ್ಣ

ಚಿತ್ರನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.