ADVERTISEMENT

ಕೃಷಿ ಪತ್ತಿನ ಸಂಘ: ₹35.59 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:09 IST
Last Updated 24 ಸೆಪ್ಟೆಂಬರ್ 2022, 5:09 IST
ಬಾಳೆಹೊನ್ನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಎಸ್ ಎಸ್ ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಮಕ್ಕಳು ಪರವಾಗಿ ಪೋಷಕರು ಪಡೆದರು.
ಬಾಳೆಹೊನ್ನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಎಸ್ ಎಸ್ ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಮಕ್ಕಳು ಪರವಾಗಿ ಪೋಷಕರು ಪಡೆದರು.   

ಬಾಳೆಹೊನ್ನೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ₹90 ಕೋಟಿ ವಹಿವಾಟು ನಡೆಸಿ ₹35.59 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಹೇಳಿದರು.

ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಸಂಘದ ನಿರ್ದೇಶಕ ಹಿರಿಯಣ್ಣ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಾದ ವಿ.ಶ್ರಾವ್ಯ, ಕೆ.ಎಸ್. ಕಾಶಿ, ಕೆ.ಎ. ಐಶ್ವರ್ಯಾ, ಅಕ್ಸಾ ತಬಸಮ್, ಪಿಯುಸಿ ಎಂ.ಎಸ್. ಸ್ಪಂದನಾ, ಫಾತಿಮಾ ಸದಫ್ ಅವರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಉಪಾಧ್ಯಕ್ಷ ಎಂ.ಸಿ. ಚಂದ್ರಶೇಖರ್, ಸದಸ್ಯರಾದ ಕೆ.ಕೆ. ವೆಂಕಟೇಶ್, ಎಂ.ಎಸ್. ಅರುಣೇಶ್, ಕೆ.ಟಿ. ವೆಂಕಟೇಶ್, ಕೆ.ಟಿ. ಗೋವಿಂದೇಗೌಡ, ಕೆ.ಜಿ. ಲೀಲಾವತಿ, ಸುಧಾ ಎಸ್.ಪೈ, ಬಿ.ಎ. ರಾಜಪ್ಪಗೌಡ, ಹಿರಿಯಣ್ಣ, ಇ.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಕೆ.ಕೃಷ್ಣಾನಂದ, ಸಿಬ್ಬಂದಿ ಚೈತನ್ಯ ವೆಂಕಿ, ಡಿ.ರಾಜೇಂದ್ರ, ಎಸ್. ಸತೀಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.