ADVERTISEMENT

ಚಿಕ್ಕಮಗಳೂರು |ಕೋವಿಡ್‌ನಿಂದ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 12:31 IST
Last Updated 19 ಜುಲೈ 2020, 12:31 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು, ಒಟ್ಟುಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ. ಭಾನುವಾರ 41 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 6 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೊಪ್ಪ ತಾಲ್ಲೂಕಿನ 70 ವರ್ಷದ ವೃದ್ಧೆ, ಚಿಕ್ಕಮಗಳೂರಿನ 70 ವರ್ಷದ ವೃದ್ಧ ಮೃತಪಟ್ಟವರು. ತಾಲ್ಲೂಕುವಾರು ಚಿಕ್ಕಮಗಳೂರು–18, ಶೃಂಗೇರಿ– 11, ತರೀಕೆರೆ , ಕಡೂರು, ಎನ್‌.ಆರ್‌.ಪುರ, ಕೊಪ್ಪ ತಲಾ ಮೂವರಿಗೆ ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT