ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಾಲಗಾರ ಸಾಮಾನ್ಯ ಕ್ಷೇತ್ರಗಳಿಗೆ ಎನ್.ಜೆ. ಜಯರಾಮ್, ವಿ.ಕೆ. ಶಿವೇಗೌಡ, ಕೆ.ಆರ್. ಸುಧೀರ್, ಜೆ.ಇ. ಆದರ್ಶಕುಮಾರ್, ಎನ್.ಜಿ. ರಮೇಶ್, ಹಿಂದುಳಿದ ವರ್ಗದ 'ಎ' ಕ್ಷೇತ್ರಕ್ಕೆ ಎಂ. ಅನೀಸ್, ಹಿಂದುಳಿದ ವರ್ಗದ 'ಬಿ' ಕ್ಷೇತ್ರಕ್ಕೆ ಡಿ.ಬಿ. ದೀಪಕ್ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಜಾತಿಗೆ ಮೀಸಲಾಗಿದ್ದ ಕ್ಷೇತ್ರಕ್ಕೆ ಸಣ್ಣಯ್ಯ, ಪರಿಶಿಷ್ಟ ಪಂಗಡದ ಕ್ಷೇತ್ರಕ್ಕೆ ಗೌರಮ್ಮ, ಮಹಿಳೆಯರ ಮೀಸಲು ಕ್ಷೇತ್ರಕ್ಕೆ ಕೆ.ಎಸ್. ರೇಖಾ, ಎನ್.ಬಿ. ಲಲಿತ ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರಕ್ಕೆ ಕೆ.ಆರ್. ಮಹೇಶ್ ಜಿ. ಅಗ್ರಹಾರ ಆಯ್ಕೆಯಾಗಿದ್ದಾರೆ. 2025ರ ಜ.6ರಂದು ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಬಿ.ಎನ್. ಪುನರ್ವ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.