ADVERTISEMENT

ಕೊಟ್ಟಿಗೆಹಾರ: ಕಾಫಿಗೂ ಅಕಾಲಿಕ ಮಳೆಯ ಪೆಟ್ಟು

ಪರಿಹಾರಕ್ಕೆ ಮೊರೆ, ಕಾಫಿಗೂ ಫಸಲು ವಿಮೆ ವಿಸ್ತರಣೆಗೆ ಆಗ್ರಹ

ಅನಿಲ್ ಮೊಂತೆರೊ
Published 7 ಡಿಸೆಂಬರ್ 2024, 5:03 IST
Last Updated 7 ಡಿಸೆಂಬರ್ 2024, 5:03 IST
ಬಣಕಲ್‌ನಲ್ಲಿ ಅಕಾಲಿಕ ಮಳೆಗೆ ಉದುರಿದ ಅರೇಬಿಕಾ ಕಾಫಿ ಹಣ್ಣು
ಬಣಕಲ್‌ನಲ್ಲಿ ಅಕಾಲಿಕ ಮಳೆಗೆ ಉದುರಿದ ಅರೇಬಿಕಾ ಕಾಫಿ ಹಣ್ಣು   

ಕೊಟ್ಟಿಗೆಹಾರ: ಅಕಾಲಿಕ ಮಳೆಯಿಂದ ಕಟಾವು ಹಂತದಲ್ಲಿದ್ದ ಅರೇಬಿಕಾ ಕಾಫಿ ಹಣ್ಣುಗಳು ಧರೆಗೆ ಉರುಳಿದ್ದು, ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ.

ಮಳೆಯ ಹೊಡೆತಕ್ಕೆ ಉದುರಿ ಬಿದ್ದಿರುವ ಕಾಫಿ ಹಣ್ಣುಗಳನ್ನು ಮಣ್ಣಿನಿಂದ ಹೆಕ್ಕಿ ತೆಗೆಯಲು ಸಾಕಷ್ಟು ಶ್ರಮ ಬೇಕು. ಕೆಲವು ಮಣ್ಣಿನಲ್ಲಿ ಕೊಳೆತು ಹೋಗುತ್ತವೆ. ಗಿಡದಲ್ಲಿ ಉಳಿದಿರುವ ಹಣ್ಣಗಳನ್ನು ಕೊಯ್ಲು ಮಾಡಿದರೂ ಒಣಗಿಸಲು ಮಳೆ ಬಿಡುವು ನೀಡಬೇಕು. ಜಿಲ್ಲೆಯಲ್ಲಿ ’ಫೆಂಗಲ್‌’ ಚಂಡಮಾರುತದ ಹೊಡೆತಕ್ಕೆ ನೂರಾರು ಎಕರೆಯಷ್ಟು ಕಾಫಿ ತೋಟಗಳಿಗೆ ಹಾನಿಯಾಗಿದೆ. ಈಗಾಗಲೇ ಕಾಫಿ ಕೊಯ್ಲು ಮುಗಿಸಿರುವ ಬೆಳೆಗಾರರು ಅದನ್ನು ಒಣಗಿಸಲಾಗದೆ ಪರದಾಡುತ್ತಿದ್ದಾರೆ. ರೋಬಸ್ಟಾ ಕಾಫಿ ಕೂಡ ಹಣ್ಣಾಗುತ್ತಿದ್ದು, ಕಟಾವು ಹಂತಕ್ಕೆ ಬಂದಿದೆ.

ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಮಂಗಳ ಅಡಿಕೆ ಬೆಳೆದ ಬೆಳೆಗಾರರು ಈ ಬಾರಿ ಕೊಳೆ ರೋಗದಿಂದ ಕೈ ಸುಟ್ಟುಕೊಂಡಿದ್ದಾರೆ. ಅಡಿಕೆ, ಕಾಳು ಮೆಣಸಿಗೆ ಸಿಗುತ್ತಿದ್ದ ಬೆಳೆ ವಿಮೆಯನ್ನು ಕಾಫಿ ಬೆಳೆಗೂ ವಿಸ್ತರಿಸಬೇಕು.ಕಾಫಿ ಬೆಳೆಗೂ ವಿಮೆ ಸಿಗುವಂತಾಗಬೇಕು ಎಂದು ಬಣಕಲ್ ಮೂಡಿಗೆರೆ ತಾಲ್ಲೂಕು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಆಗ್ರಹಿಸಿದರು.

ADVERTISEMENT
ಬಣಕಲ್‌ನಲ್ಲಿ ಮಳೆಗೆ ಉದುರಿದ ಅರೇಬಿಕಾ ಕಾಫಿ
ಕೊಟ್ಟಿಗೆಹಾರದ ಬೊಮ್ಮನಗದ್ದೆ ವ್ಯಾಪ್ತಿಯಲ್ಲಿ ರೈತರೊಬ್ಬರ ಮಂಗಳ ಅಡಿಕೆ ಬೆಳೆ ಉದುರಿ ಹೋಗಿದೆ.
ಅಡಿಕೆ ಕಾಫಿ ಕಾಳುಮೆಣಸು ಭತ್ತ ರಾಗಿಗೆ ಆಗಿರುವ ಹಾನಿಗೆ ಬೆಳೆಗಾರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಲ್ಲಿನ ಸಂಸದರು ಶಾಸಕರು ಸರ್ಕಾರದ ಗಮನ ಸೆಳೆಯಬೇಕು
ವನಶ್ರೀ ಲಕ್ಷ್ಮಣ್‍ಗೌಡ ರಾಜ್ಯ ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.