ADVERTISEMENT

ನಗರಸಭೆ ಚುನಾವಣೆ: ವರಸಿದ್ಧಿ ಅಧ್ಯಕ್ಷ, ಉಮಾದೇವಿ ಉಪಾಧ್ಯಕ್ಷೆ

3ನೇ ಬಾರಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:56 IST
Last Updated 21 ಜನವರಿ 2022, 16:56 IST
ಚಿಕ್ಕಮಗಳೂರಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭೆ ನೂತನ ಅಧಕ್ಷ ವರಸಿದ್ಧಿ ವೇಣುಗೋಪಾಲ್‌, ಉಪಾಧ್ಯಕ್ಷೆ ಉಮಾದೇವಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಅಭಿನಂದಿಸಿದರು.
ಚಿಕ್ಕಮಗಳೂರಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭೆ ನೂತನ ಅಧಕ್ಷ ವರಸಿದ್ಧಿ ವೇಣುಗೋಪಾಲ್‌, ಉಪಾಧ್ಯಕ್ಷೆ ಉಮಾದೇವಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಅಭಿನಂದಿಸಿದರು.   

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರಾಗಿ ವರಸಿದ್ಧಿ ವೇಣುಗೋಪಾಲ್‌, ಉಪಾಧ್ಯಕ್ಷರಾಗಿ ಉಮಾದೇವಿಕೃಷ್ಣ ಶುಕ್ರವಾರ ಆಯ್ಕೆಯಾದರು.ನಗರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಎ’ ಹಾಗೂ ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ‘ಬಿ’ ಮೀಸಲಾತಿ ಇದೆ.

ಅಧ್ಯಕ್ಷ ಸ್ಥಾನಕ್ಕೆ 26ನೇ ವಾರ್ಡ್‌ನ ವರಸಿದ್ಧಿ ವೇಣುಗೋಪಾಲ್‌ ಹಾಗೂ ಕಾಂಗ್ರೆಸ್‌ನಿಂದ12ನೇ ವಾರ್ಡ್‌ನ ಸೈಯ್ಯದ್‌ ಜಾವಿದ್‌ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 11ನೇ ವಾರ್ಡ್‌ನ ಉಮಾದೇವಿ ಕೃಷ್ಣ ಹಾಗೂ ಕಾಂಗ್ರೆಸ್‌ನ ಕೆ.ಆರ್‌.ಮಂಜುಳಾ ಸ್ಪರ್ಧಿಸಿದ್ದರು.

ವರಸಿದ್ಧಿ ವೇಣುಗೋಪಾಲ್‌ ಮತ್ತು ಉಮಾದೇವಿ ಅವರು ತಲಾ 23 ಮತಗಳನ್ನು ಪಡೆದು ಆಯ್ಕೆಯಾದರು. ಸೈಯದ್‌ ಜಾವಿದ್‌ ಮತ್ತು ಮಂಜುಳಾ ಅವರು 13 ಮತಗಳನ್ನು ಪಡೆದು ಸೋತರು.

ADVERTISEMENT

ವರಸಿದ್ಧಿ ಅವರು ಚಿಕ್ಕಮಗಳೂರು ನಗರಸಭೆಯ77ನೇ ಅಧ್ಯಕ್ಷ ಹಾಗೂ ಉಮಾದೇವಿ ಅವರು 46ನೇ ಉಪಾಧ್ಯಕ್ಷರಾಗಿದ್ದಾರೆ.
ನಗರಸಭೆ 35 ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯ ಸಹಿತ ಒಟ್ಟು ಮತದಾರರು 38, ಈ ಪೈಕಿ 36 ಮತದಾರರು ಹಾಜರಿದ್ದರು. 20ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ತಬಸ್ಸುಮ್‌ ಬಾನು ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಗೈರು ಹಾಜರಾಗಿದ್ದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಬಿಜೆಪಿಯವರು. ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಅವರು ಜೆಡಿಎಸ್‌ನವರು.
ನಗರಸಭೆ 35 ಸದಸ್ಯರು ಇದ್ದಾರೆ. ಬಿಜೆಪಿ– 18, ಕಾಂಗ್ರೆಸ್‌– 12, ಜೆಡಿಎಸ್‌– 2, ಪಕ್ಷೇತರ – (ಎಸ್‌ಡಿಪಿಐ1 ಸೇರಿದಂತೆ) 3 ಸದಸ್ಯ ಬಲ ಹೊಂದಿದೆ. ಜೆಡಿಎಸ್‌ನ ಇಬ್ಬರು, ಪಕ್ಷೇತರ ಒಬ್ಬರು ಸದಸ್ಯರ ಬೆಂಬಲ:ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನ ಇಬ್ಬರು ಸದಸ್ಯರು, ಪಕ್ಷೇತರ ಒಬ್ಬರು ಸದಸ್ಯರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಬಿಜೆಪಿ ಮೂರನೇ ಬಾರಿಗೆ
ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ. ‘ಪಕ್ಷದ ನಾಯಕರ ಅಣತಿಯಂತೆ ನಡೆದು ಕೊಂಡಿದ್ದೇವೆ. ವಾರ್ಡ್‌ ಅಭಿವೃದ್ಧಿ ದೃಷ್ಟಿಕೋನ
ದಿಂದ ಬೆಂಬಲಿಸಿದ್ದೇವೆ’ ಎಂದು ಜೆಡಿಎಸ್‌ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.