
ಮೂಡಿಗೆರೆ: ತಾಲ್ಲೂಕಿನ ಹೊಯ್ಸಳಲು ಸಮೀಪದ ವಾಟೇಹಳ್ಳಿ ಗ್ರಾಮದ ನಿವಾಸಿಗಳು ಇತ್ತೀಚೆಗೆ ಹಣ ಕ್ರೂಢೀಕರಿಸಿ ಗ್ರಾಮದಲ್ಲಿ ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿಪಡಿಸಿದ್ದಾರೆ.
‘ಕಳೆದ ಬಾರಿ ಸುರಿದ ಮಳೆಗೆ ಹೊಯ್ಸಳಲು ಗ್ರಾಮದಿಂದ ಪರಿಶಿಷ್ಟ ಪಂಗಡದ ಕಾಲೊನಿಗೆ ಸಂಪರ್ಕ ಕಲ್ಪಿಸುವ ವಾಟೇಹಳ್ಳಿ ರಸ್ತೆಯ ಡಾಂಬರು ಕೊಚ್ಚಿ ಹೋಗಿತ್ತು. ಅಲ್ಲಲ್ಲಿ ಗುಂಡಿಗಳಾಗಿ ರಸ್ತೆ ಬಿರುಕು ಬಿಟ್ಟಿತ್ತು. ಇದೀಗ ಮತ್ತಷ್ಟು ರಸ್ತೆ ಗುಂಡಿಮಯವಾಗಿದೆ. ಇದರಿಂದ ವಾಹನ ಸಂಚರಿಸಲು ಅಸಾಧ್ಯವಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಗ್ರಾಮದ ಜನರು ಸೇರಿ ರಸ್ತೆಯನ್ನು ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚಿದ್ದು, ಈ ಬಗ್ಗೆ ಶಾಸಕರು ಗಮನಹರಿಸಿ ರಸ್ತೆ ನಿರ್ಮಿಸಿ ಕೊಡಬೇಕು’ ಎಂದು ಶ್ರಮದಾನದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.