ಕಡೂರು: ‘ಸರ್.ಎಂ.ವಿಶ್ವೇಶ್ವರಯ್ಯನವರು ಕರುನಾಡು ಕಂಡ ಅಪೂರ್ವ ಎಂಜಿನಿಯರ್’ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಕಡೂರು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ ಮತ್ತು ಎಂಜಿನಿಯರ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸರ್.ಎಂ.ವಿ. ಕರ್ನಾಟಕದ ಪ್ರಾತಃ ಸ್ಮರಣೀಯರು. ಅವರ ದೂರದರ್ಶಿತ್ವದಿಂದ ಇಂದು ರಾಜ್ಯ ಮುನ್ನಡೆಯುತ್ತಿದೆ. ಕಡೂರಿನ ಅಭಿವೃದ್ಧಿಗೆ ಎಂಜಿನಿಯರ್ಸ್ ಅಸೋಸಿಯೇಷನ್ ಸಹಕಾರ ಅತ್ಯಗತ್ಯವಾಗಿದೆ’ ಎಂದರು.
ಅಸೋಸಿಯೇಷನ್ ಕಾರ್ಯದರ್ಶಿ ಸಿ.ಎಚ್.ಪ್ರೇಂಕುಮಾರ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳು ಎಂಜಿನಿಯರ್ಸ್‌ಗೆ ಸ್ಫೂರ್ತಿ. ಕಡೂರಿನ ಅಂಬೇಡ್ಕರ್ ವೃತ್ತದಿಂದ ಪ್ರವಾಸಿ ಮಂದಿರದ ತನಕದ ರಸ್ತೆಗೆ ವಿಶ್ವೇಶ್ವರಯ್ಯನವರ ಹೆರನ್ನಿಡಲು ಪುರಸಭೆ ಕ್ರಮ ವಹಿಸಬೇಕು. ಅವರ ಸಂಸ್ಮರಣೆಯಲ್ಲಿಯೇ ಕಡೂರಿನಲ್ಲಿ ಈ ಸಂಘ ಸ್ಥಾಪನೆಯಾಗಿದೆ. ಸಂಘದ ಚಟುವಟಿಕೆಗಳು ಸದಾ ಸಮಾಜಮುಖಿಯಾಗಿ ಮುಂದುವರಿಯುತ್ತವೆ’ ಎಂದರು. ಅಸೋಸಿಯೇಷನ್ ಅಧ್ಯಕ್ಷ ರಘುರಾಂ, ಡಿ.ಪ್ರಶಾಂತ್, ತಮ್ಮಯ್ಯ, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.