ADVERTISEMENT

ಭದ್ರಾ ಜಲಾಶಯದಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 16:03 IST
Last Updated 24 ಜುಲೈ 2018, 16:03 IST
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದ ಕ್ರೇಸ್ಟ್ ಗೇಟ್ ಗಳನ್ನು ತೆರೆದು ಮಂಗಳವಾರ ನೀರನ್ನು ಹೊರ  ಬಿಡಲಾಯಿತು.
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದ ಕ್ರೇಸ್ಟ್ ಗೇಟ್ ಗಳನ್ನು ತೆರೆದು ಮಂಗಳವಾರ ನೀರನ್ನು ಹೊರ  ಬಿಡಲಾಯಿತು.   

ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರ ನಾಲ್ಕು ಕ್ರೇಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ ನೀರನ್ನು ಹೊರಕ್ಕೆ ಬಿಡಲಾಯಿತು. ನಾಲ್ಕು ವರ್ಷಗಳ ನಂತರ ನೀರನ್ನು ಹೊರ ಬಿಡಲಾಗಿದ್ದು, ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಮಧ್ಯಾಹ್ನ 1.30ಕ್ಕೆ ಜಲಾಶಯದ ನೀರನ್ನು ಹೊರ ಬಿಡುವುದಾಗಿ ಮೊದಲೇ ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ರೈತರು ಸೇರಿದಂತೆ ಸಾವಿರಾರು ಮಂದಿ ಸ್ಥಳದಲ್ಲಿ ಉಪಸ್ಥಿತರಿದ್ದು, ನೀರು ಹರಿಯುವುದನ್ನು ಕಣ್ತುಂಬಿಕೊಂಡರು.

ಜಲಾಶಯದ ನೀರಿನ ಮಟ್ಟ ಗರಿಷ್ಟ 186 ಅಡಿಗಳಷ್ಟಿದ್ದು, ನೀರು ಹೊರ ಬಿಡುವ ವೇಳೆಗೆ 183.8 ಅಡಿ ಸಂಗ್ರಹವಾಗಿತ್ತು. ಮೊದಲಿಗೆ 2ನೇ ಕ್ರೇಸ್ಟ್ ಗೇಟ್, ನಂತರ 3ನೇ ಕ್ರೇಸ್ಟ್ ಗೇಟ್, ಬಳಿಕ 1ನೇ ಕ್ರೇಸ್ಟ್ ಗೇಟ್ ಹಾಗೂ ಕೊನೆಯದಾಗಿ 4ನೇ ಕ್ರೇಸ್ಟ್ ಗೇಟ್‌ಗಳನ್ನು ತೆರೆಯಲಾಗಿದೆ.

ADVERTISEMENT

ನಾಲ್ಕು ಕ್ರೇಸ್ಟ್ ಗೇಟ್‌ಗಳಿಂದ ಸುಮಾರು 6,200 ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿದ್ದು, ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್‌ ನೀರಿನ ಒಳಹರಿವು ಬರುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರಾ ಜಲಾಶಯದ ಮುಖ್ಯ ಎಂಜಿನಿಯರ್‌ ಆರ್.ಪಿ.ಕುಲಕರ್ಣಿ, ಅಧೀಕ್ಷಕ ಎಂಜಿನಿಯರ್‌ ಎಚ್.ಕೆ.ದಿವಾಕರನಾಯ್ಕ, ಕಾರ್ಯಪಾಲಕ ಎಂಜಿನಿಯರ್‌ ಪಿ.ವೆಂಕಟೇಶ್, ಮಂಜುನಾಥ್, ತಾಂತ್ರಿಕ ಸಹಾಯಕ ನಟರಾಜ್ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.