ADVERTISEMENT

ಶೃಂಗೇರಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸಾರ್ವಜನಿಕರು ಆತಂಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:23 IST
Last Updated 15 ಆಗಸ್ಟ್ 2025, 5:23 IST
ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮದಿಂದ ಶಾರದಾ ಮಠದ ನರಸಿಂಹವನಕ್ಕೆ ತೆರಳುವ ದಾರಿಯಲ್ಲಿ ಎರಡು ಕಾಡಾನೆ ತುಂಗಾ ನದಿ ದಾಟುತ್ತಿರುವುದು
ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮದಿಂದ ಶಾರದಾ ಮಠದ ನರಸಿಂಹವನಕ್ಕೆ ತೆರಳುವ ದಾರಿಯಲ್ಲಿ ಎರಡು ಕಾಡಾನೆ ತುಂಗಾ ನದಿ ದಾಟುತ್ತಿರುವುದು   

ಶೃಂಗೇರಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಎರಡು ಕಾಡಾನೆ ಸಂಚರಿಸುತ್ತಿದ್ದು, ಗುರುವಾರ ಬೆಳಿಗ್ಗೆಯಿಂದ ವಿದ್ಯಾರಣ್ಯಪುರ ಮತ್ತು ಶಾರದಾ ಮಠದ ನರಸಿಂಹವನದ ಗುರು ಭವನದ ಸಮೀಪ ಕಾಣಿಸಿಕೊಂಡಿದೆ. ಆದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಬುಧವಾರ ಕುಂಚೆಬೈಲು ಸಮೀಪದ ಹೊಸೂರು,ಮಾರನಕೊಡಿಗೆ ಬಳಿ ಸಂಚರಿಸಿದ್ದ ಕಾಡನೆಗಳು, ಭತ್ತದ ಗದ್ದೆ, ಅಡಿಕೆ ತೋಟದಲ್ಲಿ ಹಾಗೂ ರೈತರೊಬ್ಬರ ಗೇಟ್ ಧ್ವಂಸ ಮಾಡಿದೆ. ಬೆಸೂರಿನಲ್ಲಿ ಬೆಳಿಗ್ಗೆ ನಾಟಿ ಮಾಡಿದ ಗದ್ದೆಯಲ್ಲಿ ಸಂಚರಿಸಿದ್ದು, ಗದ್ದೆಯ ಬದುವಿನ ಮೇಲೆ ಹೆಜ್ಜೆ ಗುರುತು ಕಂಡಿದೆ. ಮಧ್ಯಾಹ್ನದ ವೇಳೆಗೆ ವೈಕುಂಠಪುರ, ವಿದ್ಯಾರಣ್ಯಪುರ ಮತ್ತು ಶಾರದಾ ಮಠದ ನರಸಿಂಹವನದ ಗುರು ಭವನದ ಸಮೀಪ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗೃತ ಕ್ರಮವಾಗಿ ಮೈಕ್ ಮೂಲಕ ಎಚ್ಚರಿಕೆ ನೀಡಿದ್ದರು.

ಶಾಲೆ,ಅಂಗನವಾಡಿಗಳಿಗೆ ರಜೆ ಘೋಷಣೆ:

ADVERTISEMENT

`ಗುರುವಾರ ಕಲ್ಕಟ್ಟೆ, ನರಸಿಂಹವನ ವ್ಯಾಪ್ತಿಯಲ್ಲಿ ವಿದ್ಯಾರಣ್ಯಪುರದ ಸಮೀಪ ಕಾಣಿಸಿಕೊಂಡಿದೆ. ಆದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೂತುಗೋಡು, ವೈಕುಂಠಪುರ ಹಾಗೂ ವಿದ್ಯಾರಣ್ಯಪುರ ಭಾಗದಲ್ಲಿನ ಶಾಲೆಗಳು ಮತ್ತು ಅಂಗನವಾಡಿಗೆ ರಜೆ ನೀಡಲಾಗಿದೆ. ಆ ಭಾಗದಲ್ಲಿ ತೋಟ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಗೆ ಕಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಭಂದಿ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಆನೆ ಸಂಚಾರದ ಚಲನವನದ ಬಗ್ಗೆ ಗಮನ ಹರಿಸಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹದ ಸಂದೇಶಗಳಿಂದ ಆತಂಕಕ್ಕೆ ಒಳಗಾಗಬಾರದು. ಶುಕ್ರವಾರ ಕೂಡ ಕಾರ್ಮಿಕರು ಮತ್ತು ಶಾಲಾ ಮಕ್ಕಳು ಹೊರಗೆ ಬಾರದಂತೆ ಮನವಿ ಮಾಡಲಾಗಿದೆ' ಎಂದು ವಲಯಾ ಅರಣ್ಯಾಧಿಕಾರಿ ಮಧುಕರ್ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.