ADVERTISEMENT

ನರಸಿಂಹರಾಜಪುರ| ಜಿಂಕೆ ಬೇಟೆ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:07 IST
Last Updated 30 ಸೆಪ್ಟೆಂಬರ್ 2025, 3:07 IST
ನರಸಿಂಹರಾಜಪುರ ತಾಲ್ಲೂಕು ಚಿಕ್ಕಗ್ರಹಾರ ವಲಯ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿರುವ ಸತ್ತ ಚುಕ್ಕಿ ಜಿಂಕೆ ಮತ್ತು ಕಾರು
ನರಸಿಂಹರಾಜಪುರ ತಾಲ್ಲೂಕು ಚಿಕ್ಕಗ್ರಹಾರ ವಲಯ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿರುವ ಸತ್ತ ಚುಕ್ಕಿ ಜಿಂಕೆ ಮತ್ತು ಕಾರು   

ನರಸಿಂಹರಾಜಪುರ: ಜಿಂಕೆಯನ್ನು ಭೇಟೆಯಾಡಿ ಅದನ್ನು ಕಾರಿನಲ್ಲಿ ಸಾಗಿಸುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಜಿಂಕೆ ಕಳೇಬರ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಾಳೆಹೊನ್ನೂರು ಭಾಗದಿಂದ ನರಸಿಂಹರಾಜಪುರದ ಕಡೆಗೆ ಬರುತ್ತಿದ್ದಾಗ ಚಿಕ್ಕ ಅಗ್ರಹಾರದ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಕಾರನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ. ಗುಬ್ಬಿಗಾ ಗ್ರಾಮದ ಜಿ.ಎನ್. ಭರತ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. 

ಕಾರ್ಯಾಚರಣೆಯಲ್ಲಿ ಚಿಕ್ಕಅಗ್ರಹಾರ ಉಪ ವಲಯ ಅರಣ್ಯಾಧಿಕಾರಿ ಎಚ್.ಬಿ.ನಂದೀಶ, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅತಾಲಟ್ಟಿ, ಗಸ್ತು ಅರಣ್ಯ ಪಾಲಕರಾದ ರಂಗಸ್ವಾಮಿ, ಸಿದ್ದೇಶ್, ಪ್ರತಾಪ್, ಅರಣ್ಯ ವೀಕ್ಷಕರಾದ ರವಿ, ಗಣೇಶ್, ವಾಹನ ಚಾಲಕ ಜಗದೀಶ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.