ADVERTISEMENT

ಗೊಬ್ಬರದ ಮೂಟೆ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:22 IST
Last Updated 7 ಸೆಪ್ಟೆಂಬರ್ 2025, 8:22 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಗೇರುಬೈಲು ಗ್ರಾಮದಲ್ಲಿ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಕರ್ಕೇಶ್ವರ ಗ್ರಾಮದ ಮೇಲ್ಪಾಲ್ ಪೂರ್ಣೇಶ್ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗೊಬ್ಬರ ಪಡೆದು ಖಾಸಗಿ ಎಸ್ಟೇಟ್‌ಗೆ ನೀಡಲು ಪಿಕಪ್‌ನಲ್ಲಿ ತೆರಳಿದ್ದರು. ಗೊಬ್ಬರದ ಮೂಟೆಗಳನ್ನು ವಾಹನದಿಂದ ಇಳಿಸುವಾದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಅವರು ಹೊತ್ತಿದ್ದ ಗೊಬ್ಬರದ ಮೂಟೆ ಅವರ ಕುತ್ತಿಗೆಯ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಹೋದರಿ ಪೂರ್ಣಿಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.