ADVERTISEMENT

ಆಡಳಿತಾತ್ಮಕ ಜ್ಞಾನ ಹೊಂದಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 3:30 IST
Last Updated 4 ಅಕ್ಟೋಬರ್ 2012, 3:30 IST

ನಾಯಕನಹಟ್ಟಿ: ಮುಖ್ಯಶಿಕ್ಷಕರಿಗೆ ಆಡಳಿತ ಜ್ಞಾನವಿದ್ದರೆ ಶಾಲಾ ನಿರ್ವಹಣೆ ಸಲಭವಾಗುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ಸಮುದಾಯ ಸಹಭಾಗಿತ್ವ ಇರುವುದರಿಂದ ಶಾಲೆ ಅಭಿವೃದ್ಧಿಗೆ ಎಸ್‌ಡಿಎಂಸಿ ಪಾತ್ರ ಪ್ರಾಮುಖ್ಯತೆ ಹೊಂದಿದೆ. ಮುಖ್ಯ ಶಿಕ್ಷಕರು ಎಸ್‌ಡಿಎಂಸಿ ಜತೆ ಉತ್ತಮ ಬಾಂಧವ್ಯ ಹೊಂದಿ ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸಬೇಕು ಎಂದರು.

ಶಿಕ್ಷಣ ಸಂಯೋಜಕ ಟಿ.ಎಸ್. ಬಸಣ್ಣ ಮಾತನಾಡಿ, ಶಾಲಾ ಆಡಳಿತ ಸುಗಮವಾಗಬೇಕಾದರೆ ಶಾಲೆಯಲ್ಲಿ ಅಗತ್ಯವಾಗಿರುವ 25 ವಹಿಗಳನ್ನು ನಿರ್ವಹಿಸಲೇಬೇಕು. ಜತೆಗೆ, ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಗೆ ಇನ್ನೂ ಹಲವು ಕಡತ ನಿರ್ವಹಿಸಬೇಕು ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಣ್ಣ ಪ್ರಾಸ್ತಾವಿಕ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರಪ್ಪ, ತಿಪ್ಪೇಸ್ವಾಮಿ, ಅರುಣ್‌ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮರಾಜು, ಮಂಜಣ್ಣ ಅನಿಮಿ ಹಾಗೂ ಶಿಕ್ಷಕರು ಹಾಜರಿದ್ದರು.

ಪರಶುರಾಂಪುರ ವರದಿ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಉತ್ತಮ ಆಡಳಿತವನ್ನು ನೀಡಲು ಮುಖ್ಯ ಶಿಕ್ಷಕರು ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ ತಿಳಿಸಿದರು.

ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಮುಖ್ಯ ಶಿಕ್ಷಕರ ಆಡಳಿತಾತ್ಮಕ ಹಾಗೂ ನಲಿ-ಕಲಿ ತರಬೇತಿ ಕಾರ್ಯಗಾರ~ ಹಾಗೂ `ಹೋಬಳಿಯ ಶಿಕ್ಷಣ ಸಂಯೋಜಕರ ಕಚೇರಿ~ ಉದ್ಘಾಟಿಸಿ ಅವರು ಮಾತನಾಡಿದರು.

 ತರಬೇತಿ ಪಡೆದ ಶಿಕ್ಷಕರು ಇಲ್ಲಿನ ಅಂಶಗಳನ್ನು ಬೋಧನೆಯಲ್ಲಿ ಅಳವಡಿಸಿಕೊಂಡು ಅನಷ್ಠಾನ ಗೊಳಿಸಬೇಕು. ಇಲಾಖೆಯಲ್ಲಿ ಆಗುವ ಬದಲಾವಣೆಗಳಿಗೆ ಸ್ಪಂದಿಸಿ ಹೊಂದಿಕೊಳ್ಳುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಬಿಆರ್‌ಪಿ ಮ್ಲ್ಲಲಿಕಾರ್ಜುನ, ಪುನಶ್ಚೇತನ ತರಬೇತಿಯಿಂದ ಬದಲಾದ ವಿಷಯಗಳ ಬಗ್ಗೆ ಮಾಹಿತಿ ಪಡೆದು ಉತ್ತಮ ಬೋಧನೆ ಮಾಡಬಹುದು ಎಂದು ತಿಳಿಸಿದರು.

ಬಿಆರ್‌ಪಿ ಸೋಮನಾಥ್ ಮಾತನಾಡಿ, ಸಂತಸದಾಯಕ ಕಲಿಕೆ ಮಕ್ಕಳಲ್ಲಿ ಉಂಟು ಮಾಡಲು ಶಿಕ್ಷಕರು ನಿರಂತರ ಚಟುವಟಿಕೆಯಿಂದಿರಲು ತರಬೇತಿಗಳ ಅಗತ್ಯವಿದೆ. ಇಂತಹ ತರಬೇತಿ ಸದುಪಯೋಗವನ್ನು ಪಡೆದು ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದರು.

ಇಸಿಓ ವೀರಭದ್ರನಾಯಕ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಡಿ.ಟಿ. ಹನುಮಂತರಾಯ, ಕಮಲಮ್ಮ  ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಗುರಪ್ಪರೆಡ್ಡಿ, ಉಮಾದೇವಿ, ಕವಿತ, ವೀಣಾ ಪಾಲ್ಗೊಂಡಿದ್ದರು. ಪ್ರಭಾರ ಮುಖ್ಯಶಿಕ್ಷಕಿ ಸಾವಿತ್ರಮ್ಮ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕರಾದ ಎಚ್.ಎಂ. ರಂಗಣ್ಣ, ರಾಮಕೃಷ್ಣಪ್ಪ, ಹನುಮಂತರಾಯ, ಬಸವರಾಜ್, ಹೇಮರಾಜ್, ಓಂಕಾರಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ಸುರೇಶ್, ಚಿತ್ತಯ್ಯ, ಶಿಕ್ಷಕರು ಇ್ದ್ದದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.