ಹಿರಿಯೂರು: ತಾಲ್ಲೂಕಿನ ಮಸ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆವರಣ ಗೋಡೆ ಮತ್ತು ಶವಾಗಾರವನ್ನು ನಿರ್ಮಿಸಿಕೊಡುವುದಾಗಿ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಮುದಾಯ ಆರೋಗ್ಯ ದಿನ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ಬಿಂಬೋದರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್‌ಕುಮಾರ್, ಡಾ.ನಂದಿನಿ, ಡಾ.ಹರೀಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಆದಿವಾಲ: ತಾಲ್ಲೂಕಿನ ಆದಿವಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಮುದಾಯ ಆರೋಗ್ಯ ದಿನ~ ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್ ಉದ್ಘಾಟಿಸಿದರು.
ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ವಿ. ವೆಂಕಟೇಶ್, ಡಾ.ವೆಂಕಟೇಶ್, ಪ್ರಭಾಕರ, ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
ಮಲ್ಲಪ್ಪನಹಳ್ಳಿ: ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮುದಾಯ ಆರೋಗ್ಯದಿನ ಕಾರ್ಯಕ್ರಮವನ್ನು ಹರ್ತಿಕೋಟೆ ಪ್ರತಾಪಸಿಂಹ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಪ್ರಭುಪ್ರಸಾದ್, ಗ್ರಾ.ಪಂ. ಸದಸ್ಯೆ ಉಮಾದೇವಿ, ಕಾಂತಪ್ಪ, ಗಾಯತ್ರಮ್ಮ, ಪಾತಲಿಂಗಮ್ಮ ಹಾಜರಿದ್ದರು.
ಉತ್ತಮ ವ್ಯವಹಾರಕ್ಕೆ ಸಲಹೆ
ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಸ್ವಸಹಾಯ ಸಂಘಗಳ ಸದಸ್ಯರು, ಸಾಲದ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸಿ, ಸಕಾಲದಲ್ಲಿ ಸಾಲ ಮರುಪಾವತಿ ಮಡುವ ಮೂಲಕ ಬ್ಯಾಂಕ್‌ನ ಜತೆ ಉತ್ತಮ ವ್ಯವಹಾರ ಇಟ್ಟುಕೊಳ್ಳಬೇಕು ಎಂದು ರಂಗನಾಥಸ್ವಾಮಿ ಕಿರು ಜಲಾನಯನ ಸಂಸ್ಥೆ ಅಧ್ಯಕ್ಷ ಎಂ. ರಾಜೇಂದ್ರನ್ ಕರೆ ನೀಡಿದರು.
ತಾಲ್ಲೂಕಿನ ನಂದಿಹಳ್ಳಿಯಲ್ಲಿ ಶನಿವಾರ `ಮದರ್~ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರು ಜಲಾನಯನದಲ್ಲಿ ಬರುವ ಸ್ವ ಸಹಾಯ ಸಂಘಗಳಿಗೆ ಸುತ್ತು ನಿಧಿ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಮದರ್ ಸಂಸ್ಥೆಯ ಎ.ಟಿ. ಶಿವಪ್ರಸಾದ್ ಮಾತನಾಡಿ, ಜಾನುವಾರು ಅಭಿವೃದ್ಧಿಗೆ ನಬಾರ್ಡ್‌ನಿಂದ ಸಾಮಾನ್ಯ ವರ್ಗದವರಿಗೆ ಶೇ. 25, ಪರಿಶಿಷ್ಟ ಜಾತಿ, ವರ್ಗದವರಿಗೆ ಶೇ. 33 ಸಬ್ಸಿಡಿ ಯೊಂದಿಗೆ ಸಾಲ ನೀಡಲಾಗುತ್ತದೆ. ಸ್ವಸಹಾಯ ಸಂಘಗಳ ಸದಸ್ಯರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಿರು ಜಲಾನಯನದಲ್ಲಿ ಬರುವ ಸ್ವಸಹಾಯ ಸಂಘಗಳಿಗೆ ತಲಾ ್ಙ 22 ಸಾವಿರದಂತೆ ಸುತ್ತುನಿಧಿ ಚೆಕ್ ವಿತರಣೆ ಮಾಡಲಾಯಿತು.
ಕೆ. ಅಯ್ಯಸ್ವಾಮಿ, ರಮೇಶ್‌ನಾಯ್ಕ, ಡಿ. ಶಂಕರನಾಯ್ಕ, ಜೆ. ರೇಖಾ, ಆರ್. ಕೃಷ್ಣಪ್ಪಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.