ADVERTISEMENT

ಭೂಮಿಯ ಫಲವತ್ತತೆಗೆ ಸಾವಯವ ಕೃಷಿ ಸಹಕಾರಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:00 IST
Last Updated 2 ಡಿಸೆಂಬರ್ 2017, 9:00 IST

ಹೊಸದುರ್ಗ: ಭೂಮಿಯ ಫಲವತ್ತತೆ ಕಾಪಾಡಲು ಸಾವಯವ ಕೃಷಿ ಪದ್ಧತಿ ಸಹಕಾರಿ ಆಗಲಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ನಿರಂಜನಕುಮಾರ್‌ ತಿಳಿಸಿದರು. ತಾಲ್ಲೂಕಿನ ಮತ್ತೋಡು ಹೋಬಳಿ ತಿಪ್ಪೇನಹಳ್ಳಿ ಗ್ರಾಮದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಿಂದ ಗುರುವಾರ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1960ರ ದಶಕದಿಂದ ಬೆಳೆಗಳ ಇಳುವರಿಯನ್ನು ಹೆಚ್ಚು ಮಾಡಲು ರಾಸಾಯನಿಕ ಗೊಬ್ಬರ, ಅಧಿಕ ಇಳುವರಿ ತಳಿಗಳು, ಸಸ್ಯ ಸಂರಕ್ಷಣಾ ಔಷಧ, ಕಳೆ ನಾಶಕ, ಸಸ್ಯ ಪ್ರಚೋದಕಗಳು ಬಳಕೆಗೆ ಬಂದವು. ಅವುಗಳನ್ನು ವಿವೇಚನೆಯಿಂದ ಬಳಸಿದ್ದರಿಂದ ಬೆಳೆಗಳ ಉತ್ಪಾದನೆ ಹೆಚ್ಚಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಅಗತ್ಯತೆ ಮೀರಿ ಅವುಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ಮಾತಾನಾಡಿ, ‘ತಾಂತ್ರಿಕತೆ ಬೆಳೆದಂತೆಲ್ಲಾ ಅದರ ಹಲವಡಿಕೆ ಕೃಷಿ ಕ್ಷೇತ್ರದಲ್ಲಿಯೂ ಹೆಚ್ಚಾಗುತ್ತಿದೆ. ಈ ಕ್ಷೇತ್ರದಲ್ಲಿ ಕಾರ್ಮಿಕರ ಸಂಖ್ಯೆ ನೀಗಿಸಲು ಉಳುಮೆ ಯಂತ್ರಗಳು, ಬಿತ್ತನೆ ಕೂರಿಗೆಗಳು ಕಟಾವು ಯಂತ್ರಗಳು, ಒಕ್ಕಣೆ ಮಾಡುವ ಯಂತ್ರಗಳ ಬಳಕೆ ಹೆಚ್ಚುತ್ತಿದೆ. ಸರ್ಕಾರ ರೈತರಿಗಾಗಿ ಗ್ರಾಹಕರ ಸೇವಾ ಕೇಂದ್ರವನ್ನು ಪ್ರತಿ ಹೋಬಳಿಯಲ್ಲಿ ತೆರೆಯಲಾಗಿದೆ. ಶೇ 30ರಿಂದ 35ರ ರಿಯಾಯ್ತಿ ದರದಲ್ಲಿ ರೈತರಿಗೆ ಈ ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ಕೊಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ರೈತ ಮುಖಂಡ ಸೋಮೇನಹಳ್ಳಿ ಸ್ವಾಮಿ, ಕಾಚಾಪುರದ ರಂಗಪ್ಪ ಸಹಾಯಕ ಕೃಷಿ ಅಧಿಕಾರಿ ಆರ್.ನಾಗರಾಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯೆ ಚಂದ್ರಮ್ಮ ಕರಿಯಪ್ಪ, ಕ್ಷೇತ್ರಾಧಿಕಾರಿ ಗಿರೀಶ್, ಭೀಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.