ADVERTISEMENT

ಮೇವು ಸಾಗಣೆ ಲಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 9:50 IST
Last Updated 10 ಏಪ್ರಿಲ್ 2012, 9:50 IST

ಮೊಳಕಾಲ್ಮುರು: ತಾಲ್ಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ಸಮರ್ಪಕವಾಗಿ ಮೇವು ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಬಿ.ಜಿ. ಕೆರೆ ಗ್ರಾಮಸ್ಥರು ಸೋಮವಾರ ಗೋಶಾಲೆಗೆ ಮೇವು ಸಾಗಣೆ ಮಾಡುತ್ತಿದ್ದ ಲಾರಿ ತಡೆದು ಪ್ರತಿಭಟನೆ ನಡೆಸಿದರು.

ಗೋಶಾಲೆಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗುವ ಹೊತ್ತಿಗೆ ಅಲ್ಲಿರುವ ಬೇರೆ ಊರಿನ ಗ್ರಾಮಸ್ಥರು ಮೇವು ಹಾಕಿಕೊಂಡಿರುತ್ತಾರೆ. ಇದರಿಂದ ಮೇವು ಸಿಗದೇ ಖಾಲಿ ಹೊಟ್ಟೆಯಲ್ಲಿ ಜಾನುವಾರುಗಳನ್ನು ವಾಪಾಸ್ ಕರೆದುಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿವಾರು ಮೇವು ವಿತರಣೆ ಮಾಡಬೇಕು ಎಂದು ಗ್ರಾಮದಲ್ಲಿ ನಡೆಯುತ್ತಿದ್ದ ತುರ್ತುಸಭೆಯಲ್ಲಿ ಭಾಗವಹಿದ್ದ ಗಾಮ ಪಂಚಾಯ್ತಿ ಸದಸ್ಯರಿಗೆ ಮನವಿ ಮಾಡಿದರು.

ನಂತರ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಈಗಿರುವ ಗೋಶಾಲೆ ಕೊಂಡ್ಲಹಳ್ಳಿ, ಕೋನಸಾಗರ ಭಾಗಕ್ಕೆ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಡ್ಲಹಳ್ಳಿ- ಬಿ.ಜಿ. ಕೆರೆ ಮಧ್ಯಭಾಗದಲ್ಲಿ ಮತ್ತೊಂದು ಗೋಶಾಲೆ ಆರಂಭಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.