ADVERTISEMENT

ಹಂದಿಗಳ ಹಾವಳಿಗೆ ಬೇಸತ್ತ ರೈತರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 5:15 IST
Last Updated 7 ಅಕ್ಟೋಬರ್ 2012, 5:15 IST

ಚಿಕ್ಕಜಾಜೂರು: ಸಮೀಪದ ಹಿರೇಕಂದವಾಡಿ ಗ್ರಾಮದಲ್ಲಿ ಕಾಡು ಹಂದಿಗಳ ಹಾವಳಿಯಿಂದ ಮೆಕ್ಕೆಜೋಳ ಹಾಳಾಗುತ್ತಿರುವದನ್ನು ಕಂಡ ರೈತರು ಕಂಗಾಲಾಗಿದ್ದಾರೆ.

ಉತ್ತಮವಾಗಿ ಬೆಳೆದು ನಿಂತ ಪೈರು ಇನ್ನೇನು ರೈತನ ಕೈ ಸೇರುವ ಹಂತದಲ್ಲಿದ್ದು, ಈಗ ಬಾಯಿಗೆ ಇಲ್ಲದಂತಾಗಿದೆ. ಇಡೀ ರಾತ್ರಿ ಗ್ರಾಮದ ಎಲ್ಲಾ ರೈತರು ಸಿಡಿ ಮದ್ದುಗಳನ್ನು ಸಿಡಿಸುತ್ತಾ ಕಾವಲು ಕಾಯುತ್ತಿದ್ದರೂ ತೊಂದರೆ ತಪ್ಪಿಲ್ಲ.

ಹಿಂಗಾರು ಕೈಕೊಟ್ಟಿರುವುದು ಒಂದೆಡೆ ಆದರೆ, ಮತ್ತೊಂದೆಡೆ ಈ ಹಂದಿಗಳ ಹಾವಳಿ ನಮ್ಮನ್ನು ಚಿಂತೆಗೀಡುಮಾಡಿದೆ ಎನ್ನುತ್ತಾರೆ ರೈತರಾದ ಎಚ್.ಬಿ. ಹಾಲೇಶಪ್ಪ, ಎಚ್.ಆರ್. ನಟರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.