ADVERTISEMENT

₹4 ಕೋಟಿ ಮೌಲ್ಯದ 9,830 ಕೆ.ಜಿ. ಗಾಂಜಾ ನಾಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:13 IST
Last Updated 27 ಜೂನ್ 2022, 5:13 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಬಳಿ ಭಾನುವಾರ ಪೊಲೀಸರು 9,830 ಕೆ.ಜಿ. ಗಾಂಜಾವನ್ನು ಸುಟ್ಟು ನಾಶಪಡಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಬಳಿ ಭಾನುವಾರ ಪೊಲೀಸರು 9,830 ಕೆ.ಜಿ. ಗಾಂಜಾವನ್ನು ಸುಟ್ಟು ನಾಶಪಡಿಸಿದರು.   

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದ ವಡೇರಹಳ್ಳಿ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಬಳಿ ಭಾನುವಾರ ಪೊಲೀಸರು ₹ 4.01 ಕೋಟಿ ಮೌಲ್ಯದ 9,830 ಕೆ.ಜಿ.ಗಾಂಜಾವನ್ನು ಸುಟ್ಟು ನಾಶಪಡಿಸಿದರು.

ಎರಡು ವರ್ಷದ ಹಿಂದೆ ರಾಂಪುರ ಸಮೀಪದ ಕೂಡ್ಲಿಗಿ ರಸ್ತೆಯಲ್ಲಿರುವ ತೋಟವೊಂದರಲ್ಲಿ ಬೆಳೆಸಿದ್ದ 9,821 ಕೆಜಿ ಗಾಂಜಾವನ್ನು ಪೊಲೀಸರುವಶಪಡಿಸಿಕೊಂಡಿದ್ದರು. ಇಷ್ಟೊಂದು ಪ್ರಮಾಣದ ಗಾಂಜಾ ವಶಕ್ಕೆ ಪಡೆದದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.

ಇದಲ್ಲದೇ ಜಿಲ್ಲೆಯ ಐದು ಕಡೆ ವಶಕ್ಕೆ ಪಡೆದಿದ್ದ 9.87 ಕೆಜಿ ಗಾಂಜಾ ಸೇರಿ ಒಟ್ಟು 9,830 ಕೆ.ಜಿ. ಗಾಂಜಾವನ್ನು ನಾಶಪಡಿಸಲಾಯಿತು.

ADVERTISEMENT

ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಕೆ. ತ್ಯಾಗರಾಜನ್, ಉನ್ನತ ಮಟ್ಟದ ಮಾದಕ ವಸ್ತುಗಳವಿಲೇವಾರಿ ಸಮಿತಿ ಸದಸ್ಯ ಪ್ರಕಾಶ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪರಶುರಾಮ್, ಡಿವೈಎಸ್ ಪಿ ಶ್ರೀಧರ್, ಸಿಪಿಐ ಸತೀಶ್, ಪಿಎಸ್‌ಐ ಗಾದಿಲಿಂಗಪ್ಪಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.