ADVERTISEMENT

ಹೊಳಲ್ಕೆರೆ | ಕಾರು– ಲಾರಿ ಡಿಕ್ಕಿ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:47 IST
Last Updated 13 ಜುಲೈ 2024, 15:47 IST
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು   

ಹೊಳಲ್ಕೆರೆ: ತಾಲ್ಲೂಕಿನ ಟಿ.ನುಲೇನೂರು ಸಮೀಪ ಗುರುವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ– 13ರಲ್ಲಿ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿಕಾರಿಪುರದ ಎಂ.ನಸ್ರುಲ್ಲಾ (45) ಮೃತಪಟ್ಟಿದ್ದಾರೆ.

ನುಸ್ರುಲ್ಲಾ ಅವರಿಗೆ ಬಾಯಿ ಕ್ಯಾನ್ಸರ್ ಕಾಯಿಲೆ ಇದ್ದು, ಚಿಕಿತ್ಸೆಗಾಗಿ ಕುಟುಂಬದವರು ಶಿವಮೊಗ್ಗದಿಂದ ಹೈದರಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಕಾರು ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಅಬ್ದುಲ್ ಖಾದರ್, ಬುಡೇನ್ ಖಾನ್, ಮುಬೀನಾ ತಾಜ್, ಶಬ್ಬೀರ್, ಮುಜಾಹಿದ್ ಖಾನಂ ಹಾಗೂ ಚಾಲಕ ಮನೋಜ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಚಿತ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.