ADVERTISEMENT

ಮೊಳಕಾಲ್ಮುರು | ಆಂಬುಲೆನ್ಸ್ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:07 IST
Last Updated 16 ನವೆಂಬರ್ 2025, 6:07 IST
ಮೊಳಕಾಲ್ಮುರು ತಾಲ್ಲೂಕು ಹಾನಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 150-ಎ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಆಂಬುಲೆನ್ಸ್
ಮೊಳಕಾಲ್ಮುರು ತಾಲ್ಲೂಕು ಹಾನಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 150-ಎ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಆಂಬುಲೆನ್ಸ್   

ಮೊಳಕಾಲ್ಮುರು: ಹೃದ್ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಅಪಘಾತವಾಗಿ ರೋಗಿ ಮೃತಪಟ್ಟಿದ್ದು, ಐವರು  ಗಾಯಗೊಂಡಿದ್ದಾರೆ.

ಮೊಳಕಾಲ್ಮುರು ತಾಲ್ಲೂಕು ಹಾನಗಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 150-ಎ ಶುಕ್ರವಾರ ಸಂಜೆ ವೇಗವಾಗಿ ಹೋಗುತ್ತಿದ್ದಾಗ ಮುಂದಿದ್ದ ಲಾರಿ ಚಾಲಕ ಮುನ್ಸೂಚನೆ ನೀಡದೆ ಬಲಕ್ಕೆ ತಿರುಗಿಸಿದ್ದರಿಂದ ಆಂಬುಲೆನ್ಸ್‌ ನಿಯಂತ್ರಣ ತಪ್ಪಿ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. 

ಘಟನೆಯಲ್ಲಿ ತೀವ್ರವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿಯ ವೆರಾತಪೇಟೆಯ ಹೃದ್ರೋಗಿ ಎಸ್.ಖಾಜಾವಲಿ (59) ತೀವ್ರವಾಗಿ ಗಾಯಗೊಂಡಿದ್ದರು.  ಪಟ್ಟಣದ ಸಾರ್ವಜನಿಕ ಆಸತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ADVERTISEMENT

ಖಾಜಾವಲಿ ಪತ್ನಿ ಜರೀನಬೇಗಂ, ಸಂಬಂಧಿಕರಾದ ಖಾಜಾ ಮೋಹಿನುದ್ದೀನ್, ಅತೀಕ್ ಅಹಮದ್ ಹಾಗೂ ಸಿಂಧನೂರು ತಾಲ್ಲೂಕಿನ ಶುಶ್ರೂಷಾಧಿಕಾರಿ ನಿರುಪದ್, ಆಂಬುಲೆನ್ಸ್ ಚಾಲಕ ರಾಮಚಂದ್ರ ಗಾಯಗೊಂಡಿದ್ದಾರೆ.

ಗಾಯಾಳುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಸಮಸ್ಯೆ ಆಗಿತ್ತು. ಮೊಳಕಾಲ್ಮುರು ಠಾಣಾ ಪಿಎಸ್‌ಐ ಮಹೇಶ್ ಲಕ್ಷ್ಮಣ ಹೊಸಪೇಟೆ ಹಾಗೂ ಸಿಬ್ಬಂದಿ ವಾಹನ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.