ಹಿರಿಯೂರಿನ ಗಿರೀಶ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ರಾಜಶೇಖರಯ್ಯ ಉದ್ಘಾಟಿಸಿದರು
ಹಿರಿಯೂರು: ‘ಅಕ್ಷರದ ಅರಿವು ಮೂಡಿಸುವ ಮೂಲಕ ಬದುಕಿಗೆ ಭದ್ರ ಅಡಿಪಾಯ ಹಾಕಿಕೊಡುವ ಗುರುಗಳನ್ನು ಸ್ಮರಿಸುವುದು ದೇವರ ಸ್ಮರಣೆಗೆ ಸಮ’ ಎಂದು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ರಾಜಶೇಖರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಿರೀಶ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 1990–91ನೇ ಸಾಲಿನಲ್ಲಿ ಗಿರೀಶ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಬಂಧ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಿವೃತ್ತಿಯ ನಂತರವೂ ಗೌರವ ಗಳಿಸಿರುವ ಏಕೈಕ ವೃತ್ತಿ ಎಂದರೆ ಗುರುಗಳದ್ದು. ಹೀಗಾಗಿಯೇ 35 ವರ್ಷಗಳ ಹಿಂದೆ ಕಲಿತವರೆಲ್ಲ ಒಟ್ಟಾಗಿ ಒಂದೆಡೆ ಸೇರಿ ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವುದೇ ಅದಕ್ಕೆ ನಿದರ್ಶನ. ನಿವೃತ್ತಿಯ ನಂತರವೂ ಕಲಿಸುವುದನ್ನು ಶಿಕ್ಷಕರು ಮುಂದುವರಿಸಬೇಕು’ ಎಂದು ಅವರು ಮನವಿ ಮಾಡಿದರು.
ಗುರುಗಳಾಗಿದ್ದ ಸಾವಿತ್ರಮ್ಮ, ರಂಗಸ್ವಾಮಿ, ಸುರೇಶ್ ಬಾಬು, ಲಿಂಗರಾಜು, ಪ್ರಕಾಶ್ ಕುಮಾರ್, ತನುಜಾ, ಜಯಂತಿ, ತಿಪ್ಪೀರಮ್ಮ, ಮುದ್ದುರಂಗಮ್ಮ ಅವರಿಗೆ ಹಳೆಯ ವದ್ಯಾರ್ಥಿಗಳು ಗೌರವ ಸಮರ್ಪಿಸಿದರು.
ಗಿರೀಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕಾಂತೇಶ್ವರ ಸ್ವಾಮಿ, ನಿರ್ದೇಶಕ ಬಸವರಾಜ್, ಹಳೆಯ ವಿದ್ಯಾರ್ಥಿಗಳಾದ ಎಂ.ವಿ.ದಿನೇಶ್, ನರೇಂದ್ರ, ಜಗದೀಶ್, ರಾಘವೇಂದ್ರ, ಅವಿನಾಶ್, ಧನಂಜಯ, ಖಲೀಲ್, ಚಂದ್ರಶೇಖರ್, ಕವಿತಾ, ಲತಾ, ಸೌಮ್ಯ ಲತಾ, ದೀಪಾ, ಮೀನಾಕ್ಷಿ, ರೂಪಕಲಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.