ADVERTISEMENT

‘ಅನುಭವ ಮಂಟಪದಿಂದ ಸಮ ಸಮಾಜ ನಿರ್ಮಾಣ’: ಗುರು ಬಸವ ಮುರುಘೇಂದ್ರ ಸ್ವಾಮೀಜಿ

ಶರಣೆ ಗಂಗಾಂಬಿಕೆ, ಹಡಪದ ಲಿಂಗಮ್ಮನವರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:53 IST
Last Updated 20 ಆಗಸ್ಟ್ 2025, 4:53 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣೆಯರಾದ ವ್ಯಕ್ತಿತ್ವ ದರ್ಶನ ಕಾರ್ಯಕ್ರಮದಲ್ಲಿ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣೆಯರಾದ ವ್ಯಕ್ತಿತ್ವ ದರ್ಶನ ಕಾರ್ಯಕ್ರಮದಲ್ಲಿ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು   

ಚಿತ್ರದುರ್ಗ: ‘ಲಿಂಗ ತಾರತಮ್ಯವಿಲ್ಲದ ಸಮ ಸಮಾಜದ ಕಲ್ಪನೆಯನ್ನು ನನಸು ಮಾಡಿದ್ದು 12ನೇ ಶತಮಾನದ ಬಸವಾದಿ ಶಿವಶರಣರು’ ಎಂದು ಮುರುಘಾಮಠದ ಸಾಧಕ ಗುರು ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣೆಯರಾದ ಗಂಗಾಂಬಿಕೆ ಹಾಗೂ ಹಡಪದ ಲಿಂಗಮ್ಮ ಅವರ ವ್ಯಕ್ತಿತ್ವ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಸವಣ್ಣನವರು ಅನುಭವ ಮಂಟಪದಲ್ಲಿ ಜಾತ್ಯಾತೀತವಾಗಿ ಎಲ್ಲರಿಗೂ ಪ್ರವೇಶ ಕಲ್ಪಿಸಿದ್ದರು. ಅದರ ಫಲದಿಂದ ಮಹಿಳೆಯರಿಗೂ ಎಲ್ಲ ರಂಗದಲ್ಲಿ ಸಮಭಾವ, ಸಮಾನ ಅವಕಾಶ ದೊರೆತಿದೆ’ ಎಂದರು.

ADVERTISEMENT

‘ಮಹಿಳೆಯರಿಗೆ ಧಾರ್ಮಿಕ ಅವಕಾಶವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಅವರಿಗೂ ಪುರುಷರಂತೆ ಎಲ್ಲ ರಂಗದಲ್ಲಿ ಪ್ರವೇಶ ನೀಡಿದರು. ಬಸವಣ್ಣನವರ ವಿಚಾರಗಳಿಗೆ ಸ್ಪಂದಿಸುತ್ತ ಮಹಾಮನೆ ಅನುಭವ ಮಂಟಪಗಳಿಗೆ ಬರುತ್ತಿದ್ದ ಶರಣೆಯರ ಯೋಗಕ್ಷೇಮ ಆತಿಥ್ಯ, ದಾಸೋಹ ಹೀಗೆ ನಾನಾ ವಿಧದಲ್ಲಿ ಸಹಕಾರ ನೀಡಿ, ತಾನು ವಚನ ರಚನೆ ಮಾಡಿದ್ದರು. ಕ್ಲಿಷ್ಟಕರ ಸಂದರ್ಭದಲ್ಲಿ ವಚನ ಸಾಹಿತ್ಯ ಸಂರಕ್ಷಣೆಯ ಹೊಣೆ ಹೊತ್ತ ಧೀರವನಿತೆ ಗಂಗಾಂಬಿಕಾ ತಾಯಿ’ ಎಂದು ಸ್ಮರಿಸಿದರು.

ಎಸ್‌ಜೆಎಂ ಶಾಲೆಯ ಶಿಕ್ಷಕಿ ಜ್ಯೋತಿ ಬಸವರಾಜ ಹರ್ತಿ, ಭಕ್ತರಾದ ಬಸವರಾಜ ಕಟ್ಟಿ, ಉಮೇಶ್‌ ಪತ್ತಾರ್‌, ಚರಣ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.