ಹೊಳಲ್ಕೆರೆ: ತಾಲ್ಲೂಕಿನ ದಾಸಿಕಟ್ಟೆಯಲ್ಲಿ ಜುಲೈ 31, ಆಗಸ್ಟ್ 1ರಂದು ಬಸವಣ್ಣ ಹಾಗೂ ಯಲ್ಲಮ್ಮ ದೇವಿ ದೇವಸ್ಥಾನಗಳ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಜುಲೈ 31ರ ಬೆಳಿಗ್ಗೆ 8ಕ್ಕೆ ದೇವಾಲಯ ಪ್ರವೇಶ, ಗಣಪತಿ ಪೂಜೆ, ಪಂಚ ಕಳಶ, ನವಗ್ರಹ ಪೂಜೆ, ವಾಸ್ತು ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಸಂಜೆ 6ಕ್ಕೆ ಸುತ್ತಲಿನ ಗ್ರಾಮಗಳಿಂದ ದೇವರುಗಳು ಬರಲಿದ್ದು, ರಾತ್ರಿ ದಾಸೋಹ ನಡೆಯಲಿದೆ.
ಆ. 1ರ ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ನೂತನ ವಿಗ್ರಹಗಳಿಗೆ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಗಂಗಾಪೂಜೆ, ಕುಂಭಾಭಿಷೇಕ ಹಾಗೂ ಕಳಶರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.