ADVERTISEMENT

ಹೊಳಲ್ಕೆರೆ | ₹1 ಕೋಟಿ ವೆಚ್ಚದ ವಸತಿ ಬಡಾವಣೆ ನಿರ್ಮಾಣ: ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:11 IST
Last Updated 22 ಸೆಪ್ಟೆಂಬರ್ 2025, 6:11 IST
   

ಹೊಳಲ್ಕೆರೆ: ಕ್ಷೇತ್ರದ ಗಡಿ ಗ್ರಾಮಗಳಲ್ಲೂ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಕೊಮಾರನಹಳ್ಳಿಯಲ್ಲಿ ₹2.2 ಕೋಟಿ ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ, ಕೋಮರನಹಳ್ಳಿಯಿಂದ ತೇಕಲವಟ್ಟಿವರೆಗೆ ಡಾಂಬರ್ ರಸ್ತೆ, ಗ್ರಾಮದ ಒಳಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಕೊಮಾರನಹಳ್ಳಿ ಗಡಿ ಗ್ರಾಮವಾಗಿದ್ದು, ₹1 ಕೋಟಿ ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗುವುದು. ಗೌನಹಳ್ಳಿ ರಸ್ತೆ, ಕೆರೆಯಾಗಳ ಹಳ್ಳಿ ರಸ್ತೆ ನಿರ್ಮಿಸಲಾಗುವುದು. 2008ರಲ್ಲಿ ಇಲ್ಲಿಯೇ ಮತಗಟ್ಟೆ ಆರಂಭಿಸಿದ್ದೆ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ₹10 ಲಕ್ಷ ಅನುದಾನ ನೀಡಿದ್ದೇನೆ. ಪಕ್ಕದಲ್ಲೇ ಇರುವ ತೇಕಲವಟ್ಟಿಯಲ್ಲಿ ₹23 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಇನ್ನು ಎರಡು ತಿಂಗಳಲ್ಲಿ ಉದ್ಘಾಟಿಸುತ್ತೇನೆ ಎಂದರು.

ADVERTISEMENT

‘ರೈತರಿಗೆ ಸಮರ್ಪಕ ವಿದ್ಯುತ್, ನೀರಾವರಿ ಕಲ್ಪಿಸಿದರೆ ದುಡಿದು ತಿನ್ನುತ್ತಾರೆ. ಶಾಸಕ ಎಂ.ಚoದ್ರಪ್ಪನ ವಿರೋಧ ಪಕ್ಷದಲ್ಲಿದ್ದರೂ, ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ಬಿಜೆಪಿ ಮುಖಂಡ ಟವಲ್ ಚಂದ್ರಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ನಂದನ ಹೊಸೂರು ಪ್ರವೀಣ್, ಮಂಜುನಾಥ್, ರಾಜಣ್ಣ, ನಾಗರಾಜಪ್ಪ, ಮಾದಣ್ಣ, ಎಲೆ ರಾಜಪ್ಪ, ರಾಜಣ್ಣ, ಶ್ರೀನಿವಾಸ್ ಹಾಗೂ ಗ್ರಾಮಸ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.