ADVERTISEMENT

ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:30 IST
Last Updated 26 ನವೆಂಬರ್ 2025, 5:30 IST
ಚಿಕ್ಕಜಾಜೂರು ಸಮೀಪದ ಬಿ. ದುರ್ಗದ ಕಾಶಿ ಮಹಾಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡ ಹಳೆ ವಿದ್ಯಾರ್ಥಿಗಳು
ಚಿಕ್ಕಜಾಜೂರು ಸಮೀಪದ ಬಿ. ದುರ್ಗದ ಕಾಶಿ ಮಹಾಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡ ಹಳೆ ವಿದ್ಯಾರ್ಥಿಗಳು   

ಚಿಕ್ಕಜಾಜೂರು: 1995–98ನೇ ಸಾಲಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸಮೀಪದ ಬಿ. ದುರ್ಗದ ಕಾಶಿ ಮಹಾಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ನಡೆಯಿತು.

1995ರಲ್ಲಿ 8ನೇ ತರಗತಿಗೆ ಸೇರಿ 1998ರಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದ ಎಲ್ಲಾ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯಲ್ಲಿ ಸೇರಿ, ಅಕ್ಷರ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಿದರು. ಹಳೆ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಯನ್ನು ಹಂಚಿಕೊಂಡರು.

ಗುರುವಂದನೆ: ನಿವೃತ್ತ ಮುಖ್ಯ ಶಿಕ್ಷಕ ಎ. ಸದಾಶಿವಪ್ಪ, ನಿವೃತ್ತ ದೈಹಿಕ ಶಿಕ್ಷಕ ಬಿ.ಎಸ್‌. ರೇವಣಸಿದ್ಧಪ್ಪ, ನಿವೃತ್ತ ಸಹ ಶಿಕ್ಷಕರಾದ ಸಿ. ಪೂರ್ಣಿಮಾ, ಎಂ.ಬಿ. ರತ್ನಮ್ಮ, ಬಿ.ಈ. ಓಂಕಾರತಪ್ಪ, ಮಾದಾಪುರ ಮಹಲಿಂಗಯ್ಯ, ನಿವೃತ್ತ ಸಹಾಯಕರಾದ ಕಾಳಿಂಗಾಚಾರ್‌, ಗೋಪಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಈಗಿನ ಶಿಕ್ಷಕರನ್ನೂ ಸಹ ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕಕರಾದ ಪಿ. ನಾಗೇಂದ್ರಪ್ಪ, ಜಿ. ಪರಮೇಶ್ವರಪ್ಪ, ಹಳೆ ವಿದ್ಯಾರ್ಥಿಗಳಾದ ಕಲ್ಲವ್ವನಾಗತಿಹಳ್ಳಿ ಗ್ರಾಮದ ಕೆ.ಎಸ್‌. ನಾಗರತ್ನಮ್ಮ ಹಾಗೂ ಕೆ.ಆರ್‌. ಜಗದೀಶ್‌ ಮತ್ತು ಬಿ. ದುರ್ಗದ ಮಲ್ಲೇಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಳೆಯ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆ ಅರ್ಪಿಸಿದರು.

ADVERTISEMENT

ಮುಖ್ಯ ಶಿಕ್ಷಕ ಕೆ. ಷಣ್ಮುಖಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಗೌಡ ಇದ್ದರು.

ಎಲ್‌.ಎಂ. ಸುನಿತಾ ಸಂಗಡಿಗರು ಪ್ರಾರ್ಥಿಸಿ, ಕಲ್ಲವ್ವನಾಗತಿಹಳ್ಳಿ ಎಚ್‌. ನಾಗೇಂದ್ರಪ್ಪ ಹಾಗೂ ಹಿರೇಕಂದವಾಡಿಯ ಜಿ.ಸಿ. ಮಮತಾ ನಿರೂಪಿಸಿದರು. ಹಿರೇಕಂದವಾಡಿಯ ಎಂ. ನಟರಾಜ್‌ ನವೀಲೇಹಾಳ್‌ ಸ್ವಾಗತಿಸಿದರು. ದಾವಣಗೆರೆಯ ಎ.ಬಿ. ಸಂತೋಷ್‌ ಕುಮಾರ್‌ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.