
ಚಿಕ್ಕಜಾಜೂರು: ಇಲ್ಲಿನ ರಾಮಕೃಷ್ಣ ದೇವಸ್ಥಾನದಲ್ಲಿ ಡಿ. 30ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ವೈಕುಂಠ ದರ್ಶನವನ್ನು ಏರ್ಪಡಿಸಲಾಗಿದೆ.
ದೇವಸ್ಥಾನದಲ್ಲಿ ಪಂಚ ಲೋಹಗಳಿಂದ ತಯಾರಿಸಲಾದ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಮೂರ್ತಿಗಳನ್ನು ಮಂಗಳವಾರ ಮುಂಜಾನೆ 5.15ಕ್ಕೆ ಪ್ರತಿಷ್ಠಾಪಿಸಿದ ಬಳಿಕ ಭಕ್ತರಿಗೆ ವೈಕುಂಠ ದರ್ಶನ ಸೇವೆ ಲಭ್ಯವಾಗಲಿದೆ.
ದೇವಸ್ಥಾನ ಸಮಿತಿಯ ಸದಸ್ಯರು ದೇವಸ್ಥಾನವನ್ನು ಭಾನುವಾರ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಯಿತು. ಕಲಾವಿದ ತೀರ್ಥಾಚಾರ್ ಅವರು ವೈಕುಂಠ ಮಂಟಪವನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡುತ್ತಿದ್ದುದು ಕಂಡುಬಂದಿತು.
ಹೋಮ ಹಾಗೂ ಮೆರವಣಿಗೆ: ಮಂಗಳವಾರ ಮುಂಜಾನೆ 4 ಗಂಟೆಗೆ ಪುರೋಹಿತ ಶ್ರೀನಿವಾಸ ಮೂರ್ತಿ ಅವರು ಹೋಮ ನಡೆಸಲಿದ್ದಾರೆ. ಸಂಜೆ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಉತ್ಸವ ಮೂರ್ತಿಗಳನ್ನು ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಪೂಜೆಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.