ADVERTISEMENT

ಹೊಸದುರ್ಗ | ಕುಮಾರಸ್ವಾಮಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:36 IST
Last Updated 30 ಅಕ್ಟೋಬರ್ 2024, 14:36 IST
ಎಂ.ಬಿ. ಕುಮಾರಸ್ವಾಮಿ
ಎಂ.ಬಿ. ಕುಮಾರಸ್ವಾಮಿ   

ಹೊಸದುರ್ಗ: ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿತ್ರಕಲಾ ಕಲಾವಿದ ಎಂ.ಬಿ.ಕುಮಾರಸ್ವಾಮಿ ಅವರನ್ನು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನ. 1ರಂದು ಶುಕ್ರವಾರ ಪಟ್ಟಣದ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಪ್ರಶಸ್ತಿ ನೀಡಲಾಗುವುದು.

ಮೂರು ವರ್ಷ ವಿಶೇಷ ಪೇಂಟಿಂಗ್ ವಿಭಾಗದಲ್ಲಿ ತರಬೇತಿ ಪಡೆದಿದ್ದಾರೆ. ಚಿತ್ರಕಲಾ ವಿಭಾಗ, ಛಾಯಾಚಿತ್ರ (ಫೋಟೋಗ್ರಾಫಿ) ಹಾಗೂ ಸಮಾಜಸೇವೆಯಲ್ಲಿಯೂ ಅವರು ಸಕ್ರಿಯವಾಗಿ ತೊಡಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.